ಬೆಂಗಳೂರು : ಜಿಎಸ್‌ಟಿ ನಕಲಿ ರಸೀದಿ ಬಳಸಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆಯ ಬೆಂಗಳೂರು ದಕ್ಷಿಣ ವಲಯದ ಅಧಿಕಾರಿಗಳು ಪತ್ತೆ ಹಚ್ಚಿ, ಇಬ್ಬರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಎಚ್. ಎಂ. ಗುರುಪ್ರಸಾದ್ ಹಾಗೂ ಮಂಜುನಾಥಯ್ಯ ಬಂಧಿತ ಆರೋಪಿಗಳು.
ವಂಚಕರು ತಮ್ಮ ಕುಟುಂಬದ ಸದಸ್ಯರು, ಸ್ನೇಹಿತರ ಹೆಸರಿನಲ್ಲಿ 30 ಕ್ಕೂ ಹೆಚ್ಚು ನಕಲಿ ಕಂಪನಿಗಳನ್ನು ತೆರೆದು 7 525 ಕೋಟಿ ವಹಿವಾಟು ನಡೆಸಿದ್ದಾರೆ. ಸರ್ಕಾರಕ್ಕೆ * 90 ಕೋಟಿ ತೆರಿಗೆ ನಷ್ಟ ಮಾಡಿದ್ದಾರೆ.


