ಹೆಚ್ ಡಿ ಕೋಟೆ: ಮಾಲೀಕರ ಜಮೀನಿನಲ್ಲಿ ಹತ್ತಿ ಬಿಡಿಸುವ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕ ಮಹಿಳೆ ಮೇಲೆ ಕಾಡು ಹಂದಿ ದಾಳಿ ನಡೆಸಿದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಕೆ.ಆರ್.ಪುರ ಹೊರವಲಯದ ಜಮೀನಿನಲ್ಲಿ ನಡೆದಿದೆ.
ಚಿಕ್ಕಮ್ಮ (55) ಹಂದಿಯ ದಾಳಿಗೊಳಗಾದ ಮಹಿಳೆಯಾಗಿದ್ದಾರೆ. ಹಂದಿ ದಾಳಿಯ ಪರಿಣಾಮ ಮಹಿಳೆಯ ಭುಜದ ಮೂಳೆ ಮುರಿತಗೊಂಡಿದೆ. ಕೂಲಿ ಕೆಲಸ ಮಾಡಿ ಮಧ್ಯಾಹ್ನ ವಿಶ್ರಾಂತಿ ಪಡೆಯುತ್ತಿದ್ದಾಗ ಏಕಾಏಕಿ ಕಾಡು ಹಂದಿ ದಾಳಿ ನಡೆಸಿದೆ. ಈ ವೇಳೆ ಇತರ ಕಾರ್ಮಿಕರು ಕೂಡ ಸ್ಥಳದಲ್ಲಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿ: ಮಲಾರ ಮಹದೇವಸ್ವಾಮಿ


