ಹೊರ ರಾಜ್ಯದಿಂದ ಬರುವ ಬಸ್ ಗಳಲ್ಲಿ ಡ್ರಗ್ಸ್ ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದರಿಂದ ಸಿಸಿಬಿ ಪೊಲೀಸರು ಶನಿವಾರ ಶೋಧ ನಡೆಸಿದರು.
ಮೆಜೆಸ್ಟಿಕ್ ಬಸ್ ನಿಲ್ದಾಣ, ಯಶವಂತಪುರ, ಗಾಂಧಿನಗರ, ಕೆ. ಆರ್. ಮಾರುಕಟ್ಟೆ ಹಾಗೂ ಹಲವು ಪ್ರದೇಶಗಳಲ್ಲಿ ಬಸ್ ಏರಿದ್ದ ಪೊಲೀಸರು, ಪಾರ್ಸೆಲ್‌ಗಳನ್ನು ತಪಾಸಣೆಗೆ ಒಳಪಡಿಸಿದರು.
ಶ್ವಾನದಳದ ಸಿಬ್ಬಂದಿ, ಬಸ್ ಗಳ ಪ್ರತಿಯೊಂದು ಭಾಗಗಳಲ್ಲಿ ಶೋಧ ನಡೆಸಿದರು. ಬಸ್ ಗಳ ಲಗೇಜ್ ಜಾಗದಲ್ಲೂ ಪರಿಶೀಲನೆ ನಡೆಸಲಾಯಿತು.