ಬೆಳಗಾವಿ: ಸಾಮಾನ್ಯವಾಗಿ ಒಂದು ಹೆಣ್ಣು ತಾಯ್ತನ ಅನುಭವ ಪಡೆಯಲು ಅದೆಷ್ಟೋ ಜನ್ಮ ಪುಣ್ಯದ ಫಲ ಹೊಂದಿರಬೇಕು. ಆದರೆ ತಾಯಿಯೊಬ್ಬಳು ಹೆತ್ತ ಗಂಡು ಮಗುವನ್ನು ರಸ್ತೆಯ ಪಕ್ಕದ ಕಸದ ತೊಟ್ಟಿಗೆ ಎಸೆದಿರುವ ಅಮಾನವೀಯ ಘಟನೆ ನಡೆದಿದೆ.
ಬೆಳಗಾವಿಯ ರಾಮತೀರ್ಥ ನಗರದಲ್ಲಿ 24 ಗಂಟೆ ಒಳಗೆ ಹುಟ್ಟಿದ್ದ ನವಜಾತ ಶಿಶುವನ್ನು ಎಸೆದಿರುವ ಘಟನೆ ಜರುಗಿದೆ. ಶಿಶು ಗಂಡಾಗಿದ್ದು ಪ್ರಾಣ ಬಿಟ್ಟಿದೆ. ಸಾರ್ವಜನಿಕರು ರಸ್ತೆ ಪಕ್ಕದ ಕಸದಲ್ಲಿದ್ದ ಶಿಶುವನ್ನು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.


