ಬೆಂಗಳೂರು: ಉದ್ಯಮಿ ಗಿರಿಜಾ ಎಂಬುವವರ ಮನೆಯಲ್ಲಿ ಇತ್ತೀಚೆಗೆ ನಡೆದಿದ್ದ ಚಿನ್ನಾಭರಣ ಹಾಗೂ ನಗದು ಕಳವು ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪುಲಕೇಶಿನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮ್ಮ ಮೇಲೆ ಆರೋಪ ಕೇಳಿಬಂದಿದ್ದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಾರು ಚಾಲಕ ಜಿಮೋನ್ ವರ್ಗೀಸ್ ಅವರೇ ಆರೋಪಿ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಠಾಣಾ ವ್ಯಾಪ್ತಿಯ ಗಿರಿಜಾ ಅವರ ಮನೆಯಲ್ಲಿ ಕೆ 2. 50 ಕೋಟಿ ಮೊತ್ತದ ಚಿನ್ನಾಭರಣ, ನಗದು ಹಾಗೂ ವಿದೇಶಿ ಕರೆನ್ಸಿಯ ಕಳವು ನಡೆದಿತ್ತು.


