ತಮಿಳುನಾಡು: ನಿಂತಿದ್ದ ಟ್ರಕ್ ಗೆ ಮಿನಿವ್ಯಾನ್ ಡಿಕ್ಕಿ ಹೊಡೆದು ಒಂದು ವರ್ಷದ ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ಬೆಳಗ್ಗೆ ಅಪಘಾತ ಸಂಭವಿಸಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ಶಂಕರಿ ಬೈಪಾಸ್ ನಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡಿರುವ ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈರೋಡ್ ನ ಪೆರುಂತುರೈನಲ್ಲಿರುವ ಕುಟ್ಟಂಪಾಳ್ಯಂ ಹರಿಜನ ಕಾಲೋನಿಯ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ. ಸೆಲ್ವರಾಜ್ (50), ಎಂ. ಆರುಮುಖಂ (48), ಅವರ ಪತ್ನಿ ಮಂಜುಳಾ (45), ಪಳನಿಸ್ವಾಮಿ (45), ಅವರ ಪತ್ನಿ ಪಾಪಪತಿ (40), ಆರ್. ಸಂಜನಾ (ಒಂದು ವರ್ಷ) ಮೃತರು. ವ್ಯಾನ್ ಚಾಲಕ ವಿಘ್ನೇಶ್ (25) ಮತ್ತು ಮೃತ ಪಳನಿಸ್ವಾಮಿ ಮತ್ತು ಪಾಪಾಪತಿ ಅವರ ಪುತ್ರಿ ಪ್ರಿಯಾ (21) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದ ನಂತರ, ವ್ಯಾನ್ ನಲ್ಲಿದ್ದವರನ್ನು ಬಹಳ ಕಷ್ಟದಿಂದ ಹೊರತೆಗೆಯಲಾಯಿತು. ವೇಗವಾಗಿ ಬಂದ ಮಿನಿ ವ್ಯಾನ್ ಲಾರಿಗೆ ಸಂಪೂರ್ಣವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ಸಿಸಿಟಿವಿ ದೃಶ್ಯಾವಳಿ ಬಿಡುಗಡೆಯಾಗಿದೆ. ಚಿನ್ನಗೌಂಟನೂರು ಬಳಿಯ ಶಂಕರಿ ಬೈಪಾಸ್ ಬಳಿ ಬಂದಾಗ ನಿಂತಿದ್ದ ಲಾರಿಗೆ ಮಿನಿವ್ಯಾನ್ ಡಿಕ್ಕಿ ಹೊಡೆದಿದೆ.


