ತಿಪಟೂರು: ಇಂದಿನ ಸರಕಾರ ಕೇವಲ ಡಿಗ್ರಿ ಪಾಸಾದವರನ್ನು ಪಠ್ಯಕ್ರಮ ಪರಿಷ್ಕರಣೆಗೆ ನೇಮಿಸಿದ್ದು, ಬಸವಣ್ಣನವರ ನೀಡಿದ ವಚನ ಸಾಹಿತ್ಯ ಮತ್ತು ಚಿಂತನೆಗಳನ್ನು ಬದಲಾಯಿಸಿದ್ದರು ಇದರ ಶ್ರೇಯಸ್ಸು ಆರ್ ಎಸ್ ಎಸ್ ನವರಿಗೆ ಸಲ್ಲಿಸಬೇಕು ಎಂದು ಕಾಂಗ್ರೆಸ್ ಶಾಸಕ ಕೆ ಷಡಕ್ಷರಿ ಹೇಳಿದರು.
ನಗರದ ಒಕ್ಕಲಿಗರ ಭವನದಲ್ಲಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿಗೆ ಮಾದರಿಯಾಗಿ ಇರಬೇಕಾದ ಬಿಇಓ ಕಚೇರಿ ಸೋರುತ್ತಿದ್ದು, ಎಲ್ಲಾ ರೀತಿಯ ಮೂಲ ಸೌಕರ್ಯ ಉಳ್ಳ ಕಟ್ಟಡ ನಿರ್ಮಿಸಲಾಗುವುದು. ತಿಪಟೂರನ್ನು ಜಿಲ್ಲೆ ಮಾಡುವ ನಿಟ್ಟಿನಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ನಾನು ಸಚಿವ ರಾಜಣ್ಣನವರನ್ನು ಕೇಳಿದೆ, ನಿಮಗೆ ಮಂತ್ರಿಗಿರಿ ಬೇಕೆಂದರೆ ತಿಪಟೂರನ್ನು ಜಿಲ್ಲೆಯನ್ನಾಗಿ ಮಾಡಿ. ಇಲ್ಲ ಮಂತ್ರಿ ಗಿರಿ ಬಿಟ್ಟು ಕೊಡಲಿ. ನನಗೆ ಮಂತ್ರಿ ಗಿರಿ ಕೊಡದಿದ್ದರೂ ಪರವಾಗಿಲ್ಲ, ತಿಪಟೂರನ್ನು ಜಿಲ್ಲೆಯನ್ನಾಗಿ ಮಾಡಲಿ ಎಂದರು.
ಈ ಕಾರ್ಯಕ್ರಮದಲ್ಲಿ ವಚನಕಾರರಾದ ಮಹೇಶ್ ಚಟ್ನಳ್ಳಿ, ಸರ್ಕಾರಿ ಪಿಯು ಕಾಲೇಜ್ ನ ಪ್ರಾಂಶುಪಾಲ ಎಂ.ಡಿ.ಶಿವಕುಮಾರ್, ಅನುದಾನ ರಹಿತ ಶಿಕ್ಷಣ ಸಮಸ್ಯೆ ಅಧ್ಯಕ್ಷ ಆದಿತ್ಯ ಜಯಣ್ಣ, ಬಿಒ ಜಿ ಚಂದ್ರಯ್ಯ, ತಿಪಟೂರಿನ ಶಾಲಾ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು


