ಬಾಗಲಗುಂಟೆ ಹಾಗೂ ಸಂಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆಯ ಶೆಟ್ಟಿಹಳ್ಳಿಯಲ್ಲಿರುವ ಮನೆಯಲ್ಲಿ ಕಳ್ಳತನ ಮಾಡಿದ್ದ ರವಿಕುಮಾರ್, ಇಮ್ರಾನ್ ಹಾಗೂ ಜೈಕುಮಾರ್ ನನ್ನು ಬಂಧಿಸಲಾಗಿದೆ. 7 6.45 ಲಕ್ಷ ಮೌಲ್ಯದ 129 ಗ್ರಾಂ ತೂಕದ ಚಿನ್ನಾಭರಣ, 1.08 ಲಕ್ಷ ನಗದು ಹಾಗೂ 2 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕುಟುಂಬಸ್ಥರೆಲ್ಲರು ಧರ್ಮಸ್ಥಳಕ್ಕೆ ತೆರಳಿದ್ದಾಗ ಮನೆಯಲ್ಲಿ ಕಳ್ಳತನ ಮಾಡಿದ್ದರು.


