ವಾಮಾಚಾರ ನಡೆಸಿ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಪತ್ನಿ ವಿರುದ್ಧ ಉದ್ಯಮಿಯೊಬ್ಬರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಉದ್ಯಮಿ ದೇವ್ ಕುಮಾರ್(39) ಅವರು ನೀಡಿದ ದೂರಿನ ಮೇರೆಗೆ ಪತ್ನಿ ಎಂ. ಪಿ. ಐಶ್ವರ್ಯ, ಅತ್ತೆ ಮಹಾಲಕ್ಷ್ಮೀ ಮತ್ತು ಮಾವ ಮಂಜುನಾಥ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಐಶ್ವರ್ಯ ಅವರು ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ‘ಪತ್ನಿ ಹಾಗೂ ಅವರ ಕುಟುಂಬದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಉದ್ಯಮಿ ಮನವಿ ಮಾಡಿದ್ದಾರೆ.


