ತುರುವೇಕೆರೆ: ಸಿದ್ದಗಂಗಾ ಮಠದಲ್ಲಿ ನಡೆದ ಜಿಲ್ಲಾಮಟ್ಟದ Under 14 free style Wrestling ಕುಸ್ತಿಯ 48 ಕೆಜಿ ವಿಭಾಗದಲ್ಲಿ ಮಾರುತಿ ವಿದ್ಯಾ ಮಂದಿರ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಯಶ್ವಂತ್ ಕಲ್ಮನೆ ಜಯಗಳಿಸಿ, ಚಿನ್ನದ ಪದಕ ಗೆದ್ದಿದ್ದಾನೆ.
ತಾಲೂಕಿನ ಅಮ್ಮಸಂದ್ರ ನಿವಾಸಿಗಳಾದ ಪದ್ಮ ಮತ್ತು ರೋಹಿತ್ ದಂಪತಿಯ ಪುತ್ರನಾದ, ಯಶ್ವಂತ್ ಕಲ್ಮನೆ ಹುಟ್ಟೂರಿಗೆ ಮತ್ತು ವ್ಯಾಸಂಗ ಮಾಡುತ್ತಿರುವ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ. ಯಶ್ವಂತ್ 9ನೇ ತಾರೀಖಿನಂದು ಬಾಗಲಕೋಟೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಪಂದ್ಯದಲ್ಲೂ ಕೂಡ ಭಾಗವಹಿಸಲಿದ್ದಾನೆ.
ಈತನ ತಾಯಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಕೂಡ ಆಗಿದ್ದಾರೆ. ಈತನ ಈ ಯಶಸ್ಸಿಗೆ ತುರುವೇಕೆರೆ ತಾಲೂಕಿನ ಪದ್ಮರೋಹಿತ್ ದಂಪತಿಯ ಸ್ನೇಹಿತರು ಹಾಗೂ ಬಂಧು ಮಿತ್ರರು ಶಿಕ್ಷಕ ವರ್ಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಹಾಗೂ ಯಶ್ವಂತ್ ಕಲ್ಮನೆರವರು ರಾಷ್ಟ್ರ ಆಗುವ ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದ್ದಾರೆ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ