ಬೆಂಗಳೂರು: ಆರ್ ಆರ್ ನಗರ ವಲಯದ ಕೆಂಗೇರಿ ವಿಭಾಗದ ವಾರ್ಡ್ ಹೆಮ್ಮಿಗೆಪುರ ವ್ಯಾಪ್ತಿಯ ತಲಘಟ್ಟಪುರ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ, Casa Grand ವಸತಿ ಸಮುಚ್ಚಯ ನಿರ್ಮಾಣ ಮಾಡುವ ಸಂಸ್ಥೆಯು ಪ್ಲೆಕ್ಸ್ ಗಳನ್ನು ಹಾಕಿದ್ದು, ಪ್ಲೆಕ್ಸ್ ಗಳನ್ನು ತೆರವುಗೊಳಿಸಿ 50, 000 ರೂ.ಗಳ ದಂಡವನ್ನು ವಸೂಲಿ ಮಾಡಲಾಗಿರುತ್ತದೆ.
ಸಹಾಯಕ ಕಾರ್ಯಪಾಲಕ ಅಭಿಯಂತರರು ಪೂರ್ಣಿಮಾ, ಮೋತಿಲಾಲ್ ಚೌಹಾಣ್ ವಾರ್ಡ್ ಮಾರ್ಷಲ್ ಸೇರಿದಂತೆ ಇನ್ನಿತರರು ವಲಯದ ಅಧೀಕ್ಷಕ ಅಭಿಯಂತರ ನಂದೀಶ. ಜೆ. ಆರ್ ರವರ ನಿರ್ದೇಶನದಂತೆ ದಂಡ ವಿಧಿಸಲಾಗಿದೆ.


