ಚಾಮರಾಜನಗರ: ಹೊಗೆನಕಲ್ ಜಲಪಾತದ ಬಂಡೆಗಳ ಮೇಲೆ ಯುವಕ ಹಾಗೂ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಯುವಕ ಸಾವನ್ನಪ್ಪಿದರೆ, ಯುವತಿ ಗಂಭೀರ ಸ್ಥಿತಿಯಲ್ಲಿದ್ದಾಳೆ.
ಉಮೇಶ್(24) ಮೃತಪಟ್ಟಿರುವ ಯುವಕನಾಗಿದ್ದು 16 ವರ್ಷದ ರಕ್ಷಿತಾ ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯಾಗಿದ್ದಾಳೆ. ತಮಿಳುನಾಡಿನ ಧರ್ಮಪುರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಸಿದ್ಧ ಪ್ರವಾಸಿ ಕೇಂದ್ರವಾದ ತಮಿಳುನಾಡು ಹಾಗೂ ಕರ್ನಾಟಕ ಗಡಿಯಲ್ಲಿರುವ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ಈ ಜೋಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೊಗೆನಕಲ್ ಜಲಪಾತದ ಬಂಡೆಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಇವರಿಬ್ಬರು ಬಿದ್ದಿದ್ದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.
ವಿಷ ಕುಡಿದು ಬಹಳಷ್ಟು ಸಮಯವಾಗಿದ್ದರಿಂದ ಆಸ್ಪತ್ರೆಗೆ ತಲುಪುವ ಮೊದಲೇ ಉಮೇಶ್ ಮೃತಪಟ್ಟಿದ್ದಾನೆ. ರಕ್ಷಿತಾ ಸ್ಥಿತಿ ಚಿಂತಾಜನಕವಾಗಿದೆ.


