ಆಟೋರಿಕ್ಷಾದಿಂದ ಜಿಗಿದು ಕೇರಳದ ಮಹಿಳೆಯೊಬ್ಬರು ಕೈ ಮುರಿದುಕೊಂಡಿರುವ ಘಟನೆ ಮಹದೇವಪುರ ಪೊಲೀಸ್ ವ್ಯಾಪ್ತಿಯ ಪೈ ಲೇಔಟ್ ನಲ್ಲಿ ನಡೆದಿದೆ.
ಸಂತ್ರಸ್ತೆ ರೋಶಿನಿ ಜೋಸೆಫ್, ಬಿ ನಾರಾಯಣಪುರದ ಜಿಮ್ ಬಳಿಯಿಂದ ವಿಜಿನಾಪುರದ ಬೃಂದಾವನ ಲೇಔಟ್ ಗೆ ಆಟೋದಲ್ಲಿ ಹೋಗುತ್ತಿದ್ದರು.
ಆಟೋ ಚಾಲಕ ಜನರಲ್ ಮಾರ್ಗ ಬಿಟ್ಟು ಬೇರೆ ಮಾರ್ಗ ಹಿಡಿಯುವುದನ್ನು ಗಮನಿಸಿದ ಮಹಿಳೆ, ಆಟೋರಿಕ್ಷಾ ನಿಲ್ಲಿಸಲು ಕೇಳಿದಳು. ಆದರೆ ಚಾಲಕ ವೇಗವಾಗಿ ಓಡಿಸುತ್ತಿದ್ದ. ತೊಂದರೆ ಗ್ರಹಿಸಿದ ಆಕೆ ಆಟೋದಿಂದ ಜಿಗಿದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.


