ತುಮಕೂರು: ಜಮೀನು ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಕೆ ಐ ಎ ಡಿ ಬಿ ವಿಶೇಷ ಭೂಸ್ವಾದಿನಾಧಿಕಾರಿ ತಬಸು ಜಾಹಿರಾ ಹಾಗೂ ಬೆಳ್ಳಾವಿ ಉಪತಸೀಲ್ದಾರ್ ಶಬ್ಬೀರ್ ಗೆ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ 20000 ದಂಡ ವಿಧಿಸಿ ಇಲ್ಲಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಮಲಿಂಗೇಗೌಡ ತೀರ್ಪು ನೀಡಿದ್ದಾರೆ.
ಜಿಲ್ಲೆಯ ಕುಣಿಗಲ್ ತಾಲೂಕಿನ ಜಯರಾಮ ಎಂಬುವರು 2017ರಲ್ಲಿ ತಮ್ಮ ತಂದೆ ಹೆಸರಿಗೆ ಪೌತಿ ಖಾತೆ ಮಾಡಿಸುವ ಸಲುವಾಗಿ ಅಂದಿನ ಉಪ ವಿಭಾಗಾಧಿಕಾರಿಯಾಗಿದ್ದ ತಬಸುಮ್ ಜಹೇರಾ ಅವರನ್ನು ಭೇಟಿ ಮಾಡಿದ್ದರು.
ಆ ವೇಳೆ ಜಹರ ಅವರು ತಮ್ಮ ಕಚೇರಿಯ ಕೇಸ್ ವರ್ಕರ್ ಶಬ್ಬೀರ್ ಮೂಲಕ 35,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 35,000 ಹಣವನ್ನು ಕೂಡ ಪಡೆದಿದ್ದರು ಅದಾದ ನಾಲ್ಕು ತಿಂಗಳ ಬಳಿಕ ಮತ್ತೊಮ್ಮೆ 25,000 ಲಂಚವನ್ನು ಕೇಳಿದ್ದರು ಈ ಹಿನ್ನೆಲೆ ಬೇಸತ್ತ ಜೈರಾಮ್ ಎಸಿಬಿಗೆ ದೂರು ನೀಡಿದ್ದರು. ದೂರಿನ ಅನ್ವಯ ದಾಳಿ ನಡೆಸಿ ಭ್ರಷ್ಟಾಚಾರ ನಿಗ್ರಹದಳದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಸಪ್ಟೆಂಬರ್ 13 ರಂದು ನ್ಯಾಯಾಲಯ ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆರೋಪಿಗಳಿಗೆ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 20,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.


