ಶುಕ್ರವಾರದಿಂದ ಎರಡು ದಿನಗಳ ಕಾಲ ಕಾಲೇಜಿನಲ್ಲಿ ನಡೆಯಲಿರುವ ಕಲ್ಪ ಜ್ಞಾನ ದರ್ಪಣ ಕೆ.ಸಿ. ಎಸ್ ಎಜುಕೇಶನ್ ಫೇರ್ ಕಾರ್ಯಕ್ರಮದಲ್ಲಿ ಮೈಸೂರು ಆನೆ, ಅಂಬಾರಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.
ಖ್ಯಾತ ವೈದ್ಯರಾದ ಡಾ. ಜಿ ಎಸ್ ಶ್ರೀಧರ್ ಅವರು, ಈ ವಸ್ತು ಪ್ರದರ್ಶನದ ಅಂಗವಾಗಿ ವಿಶ್ವ ವಿಖ್ಯಾತ ಮೈಸೂರು ದಸರಾ ಅಂಬಾರಿಯ ಪ್ರತಿಕೃತಿ ಮಾಡಿಸಿ ಇಲ್ಲಿ ಪ್ರದರ್ಶಿಸುತ್ತಿದ್ದಾರೆ.
ಮೈಸೂರಿನ ಕುಕ್ಕರಹಳ್ಳಿಯ ಕಲಾವಿದ ಮಂಜು ಈ ಆನೆ, ಅಂಬಾರಿ ಪ್ರತಿಕೃತಿ ರಚಿಸಿದ್ದು, ಸುಮಾರು ಎಂಟು ಅಡಿ ಉದ್ದ, ಆರು ಅಡಿ ಅಗಲ ಮತ್ತು ಹತ್ತು ಅಡಿ ಎತ್ತರದ ಈ ಪ್ರತಿಕೃತಿ ಅತ್ಯಂತ ಆಕೃರ್ಷಕವಾಗಿದ್ದು ನೋಡುಗರ ಗಮನ ಸೆಳೆಯುತ್ತದೆ. ಸುಮಾರು ಹತ್ತು ಜನ ಕಲಾವಿದರು 11 ದಿನಗಳ ಕಾಲ ನಿರ್ಮಿಸಿರುವ ಆನೆ, ಅಂಬಾರಿಯ ಪ್ರತಿಕೃತಿ ಸಾರ್ವಜನಿಕ ಪ್ರದರ್ಶನಕ್ಕೂ ಇರಲಿದೆ.
ವರದಿ: ಆನಂದ್ ತಿಪಟೂರು


