ಹೆಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಡಾ.ಅಂಬೇಡ್ಕರ್ ಮತ್ತು ಸಂವಿಧಾನ ಪೀಠಿಕೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಎಲ್ಲಾಗಣ್ಯರು ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕೃಷ್ಣಮೂರ್ತಿ ಚಾಮರಂ ಮಾತನಾಡಿ, ಪ್ರತಿಯೊಬ್ಬರು ಸಂವಿಧಾನದ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಾನತೆಯನ್ನ ಕಾಣಲು ಸಾಧ್ಯ. ಹಗಲು ರಾತ್ರಿ ಎನ್ನದೇ ಪರಿಶ್ರಮಪಟ್ಟು ಬಹಳ ಉತ್ತಮವಾದ ಸಂವಿಧಾನವನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ. ಇದರ ಪೀಠಿಕೆಯನ್ನ ಬರೆಯಬೇಕಾದರೆ ಬಹಳ ಜ್ಞಾನರ್ಜನೆಯಿಂದ ರಚಿಸಿದ್ದಾರೆ ಎಂದರು.
ನಾವು ಭಾರತವನ್ನ ಅಖಂಡ ರಾಷ್ಟವಾಗಿ ಕಟ್ಟಲು ನಾವು ಧರ್ಮನಿರಾಪೇಕ್ಷೆಯಿಂದ ಜೀವಿಸಬೇಕು. ಯುವ ಜನರನ್ನ ಜಾತಿ ಧರ್ಮವನ್ನು ಪ್ರೀತಿಸಲು ತಿಳಿಹೇಳದ ರಕ್ತ ರಹಿತ ದೇಶವನ್ನು ಕಟ್ಟಲು ತಿಳಿಹೇಳಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಾನು ಸಹ ಈ ತಾಲ್ಲೂಕಿನಲ್ಲಿ ಒಬ್ಬ ಶಾಸಕನಾಗಲೂ ಕಾರಣ ಅಂಬೇಡ್ಕರ್ ನೀಡಿದ ಸಂವಿಧಾನ. ನಾವೆಲ್ಲಾ ಏಕತೆಯಿಂದ ಸಂವಿಧಾನದಡಿಯಲ್ಲಿ ಜೀವಿಸೋಣ ಎಂದು ಕರೆ ನೀಡಿದರು.
ತಹಶೀಲ್ದಾರ್ ಸಣ್ಣರಾಮಪ್ಪ , ಬೆಟ್ಟಯ್ಯಕೋಟೆ, ಹೆಚ್.ಸಿ.ನರಸಿಂಹಮೂರ್ತಿ, ಶಬ್ಬೀರ್ ಹುಸೇನ್, ರಾಮಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ಧರಣೇಶ್, ಬಿಇ ಒ ಮಾರಪ್ಪ, ಎಲ್ಲಾ ಅಧಿಕಾರಿ ವರ್ಗದವರು ಪ್ರಗತಿಪರ ಸಂಘಟನೆಯ ಮುಖಂಡರು, ನಾಗರಿಕರು ಸಾವಿರಾರು ಜನರು ಪಾಲ್ಗೊಂಡಿದರು.
ವರದಿ: ಮಲಾರ ಮಹದೇವಸ್ವಾಮಿ


