ಬೆಂಗಳೂರು: ಜಯನಗರದ 4ನೇ ಬ್ಲಾಕ್ ನಲ್ಲಿ 25 ವರ್ಷದ ಯುವಕ ನಿರ್ಮಾಣ ಹಂತದ ಕಟ್ಟಡದಲ್ಲಿ ಕಬ್ಬಿಣದ ಸರಳುಗಳ ಮೇಲೆ ಬಿದ್ದ ಪರಿಣಾಮ, ಕಬ್ಬಿಣದ ಸರಳುಗಳು ಹೊಟ್ಟೆ, ಕಾಲಿಗೆ ಚುಚ್ಚಿ ಹಿಂದೆ ಬಂದಿದ್ದವು.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಬ್ಬಿಣದ ಸರಕುಗಳನ್ನು ಕಟ್ ಮಾಡಿ ಯುವಕನನ್ನು ರಕ್ಷಿಸಿ ಗಂಭೀರ ಗಾಯಗೊಂಡ ಯುವಕನಿಗೆ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.


