ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ 9ನೇ ಮಹಡಿಯಿಂದ ಬಿದ್ದು ವಿಜಯಲಕ್ಷ್ಮಿ (17) ಎನ್ನುವವರು ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಜ್ಞಾನಭಾರತಿ ಬಳಿಯ ಜ್ಞಾನಜ್ಯೋತಿ ನಗರದಲ್ಲಿ ತಾಯಿ ಜೊತೆ ವಾಸವಿದ್ದ ವಿಜಯಲಕ್ಷ್ಮಿ, ಪಿಯು ಕಾಲೇಜೊಂದರಲ್ಲಿ ಓದುತ್ತಿದ್ದಳು.
‘ಸೆ.19 ರಂದು ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿ, ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ 9ನೇ ಮಹಡಿಯಿಂದ ಬಿದ್ದು ಗುರುವಾರ ಮೃತಪಟ್ಟಿದ್ದಾಳೆ’ ಎಂದು ಪೊಲೀಸರು ತಿಳಿಸಿದರು.


