ಅಪ್ರಾಪ್ತ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತಂದೆಗೆ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಬೆಂಗಳೂರು ಗ್ರಾಮಾಂತರ ಎಫ್ ಟಿಎಸ್ ಸಿ-1ನೇ ನ್ಯಾಯಾಲಯ ತೀರ್ಪು ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಕಸಬಾ ಹೋಬಳಿ ರಾಜಘಟ್ಟ ಗ್ರಾಮದ 40 ವರ್ಷದ ತಂದೆ ಅಪರಾಧಿ.
5 ವರ್ಷ ಜೈಲು, 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಟಿ. ಸಿ. ಶ್ರೀಕಾಂತ್ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಎ. ಚಂದ್ರಕಲಾ, ವಾದ ಮಂಡಿಸಿದ್ದರು.


