ಚಾಮರಾಜನಗರ: ಕಾವೇರಿ ನೀರಿನ ಸಂಬಂಧ ಹಳೇ ಮೈಸೂರು ಭಾಗದಲ್ಲಿ ಹೋರಾಟದ ಕಿಚ್ಚು ಜೋರಾಗಿದ್ದು ರೈತರು, ಕನ್ನಡಪರ ಸಂಘಟನೆಗಳು ಜಿಲ್ಲೆಯಲ್ಲಿ ಸರಣಿ ಪ್ರತಿಭಟನೆ ನಡೆಸುತ್ತಿವೆ.
ಶನಿವಾರ ಮಧ್ಯಾಹ್ನ ಚಾಮರಾಜನಗರ-ಕೊಳ್ಳೆಗಾಲ ಹೆದ್ದಾರಿ ತಡೆದ ರೈತ ಸಂಘಟನೆಯ ಕಾರ್ಯಕರ್ತರು ತಮಿಳುನಾಡು, ಕರ್ನಾಟಕ ಹಾಗೂ ಕಾವೇರಿ ನ್ಯಾಯಾಧೀಕರಣದ ವಿರುದ್ಧ ಆಕ್ರೋಶ ಹೊರಹಾಕಿದರು.
ಕಾವೇರಿ ನೀರಿನ ಸಂಬಂಧ ಮಂಡ್ಯ ಬಂದ್ ಮಾಡಲಾಗಿದ್ದು ಅದರಂತೆ ಚಾಮರಾಜನಗರವನ್ನು ಕೂಡ ಬಂದ್ ಮಾಡುತ್ತೇವೆ. ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರನ್ನು ನಿಲ್ಲಿಸದೇ ಇದ್ದರೇ ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಜೊತೆ ಸಭೆ ಸೇರಿ ಚಾಮರಾಜನಗರ ಬಂದ್ ಮಾಡಲಾಗುತ್ತದೆ ಎಂದು ರೈತ ಮುಖಂಡ ಹೆಬ್ಬಸೂರು ಬಸವಣ್ಣ ಎಚ್ಚರಿಕೆ ಕೊಟ್ಟಿದ್ದಾರೆ.


