ಬೆಂಗಳೂರು : ವೀಲಿಂಗ್ ಮಾಡುವ ಪುಂಡರನ್ನು ರೌಡಿಗಳ ರೀತಿಯಲ್ಲೇ ಪರಿಗಣಿಸಿ ಕಠಿಣ ಕ್ರಮ ಜರುಗಿಸಲು ಚಿಂತಿಸಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ. ಎನ್. ಅನುಚೇತ್ ಹೇಳಿದ್ದಾರೆ. ಅಪ್ರಾಪ್ತರು ವೀಲಿಂಗ್ ಮಾಡಿ ಸಿಕ್ಕಿಬಿದ್ದರೆ ಅವರ ಪಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಇನ್ನು ಸೈಲೆನ್ಸರ್‌ಗಳಲ್ಲಿ ಹೆಚ್ಚಿನ ಶಬ್ದ ಬರುವಂತೆ, ಕರ್ಕಶ ಧ್ವನಿಗಳನ್ನು ವಾಹನಗಳಲ್ಲಿ ಅಳವಡಿಸಿ ನವೀಕರಣ ಗೊಳಿಸುವ ಗ್ಯಾರೇಜ್‌ಗಳ ಮೇಲೆ ಕಣ್ಣಿಡಲಾಗಿದೆ. ಗ್ಯಾರೇಜ್ ಮಾಲೀಕರಿಗೂ ಬಿಸಿ ಮುಟ್ಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


