ಹೆಚ್.ಡಿ.ಕೋಟೆ: ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ ತಾಲೂಕು ವಿಕಲಚೇತನರ ಹಾಗೂ ಸಬಲೀಕರಣ ಇಲಾಖೆ ಇವರ ಸಹಯೋಗದೊಂದಿಗೆ ತಾಲೂಕಿನ ಹೈರಿಗೆ ಗ್ರಾಮದ, ಗ್ರಾಮ ಪಂಚಾಯತಿಯಲ್ಲಿ ಮಾನಸಿಕ ಕಾಯಿಲೆ ಇರುವ ಹಾಗೂ ವಿಕಲಚೇತನರಿಗೆ ಕಾನೂನು ಅರಿವು ಮತ್ತು ಆರೋಗ್ಯ ಸೇವಾ ಸೌಲಭ್ಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಗಳಾದ ಡಾ.ಟಿ.ರವಿಕುಮಾರ್ ರವರು, ಜೀವಿಕ ಸಂಸ್ಥೆಯ ಉಮೇಶ್ ಹಾಗೂ ವಿಕಲಚೇತನರ ತಾಲೂಕು ಸಂಯೋಜಕರಾದ ಮಹಾದೇವಯ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶಿವಕುಮಾರ್, ತಾಲೂಕ್ ಆರೋಗ್ಯ ಅಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕರು ನಾಗೇಂದ್ರ, ರವಿರಾಜ್, ಲಕ್ಷ್ಮೀ ಭಟ್, ಪ್ರತಾಪ್ ಪಂಚಾಯತಿ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತೆಯರು, ಮಾನಸಿಕ ಕಾಯಿಲೆ ಮತ್ತು ವಿಕಲಚೇತನರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು
ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ಕಾನೂನು ಅರಿವು ಮತ್ತು ಆರೋಗ್ಯ ಸೇವಾ ಸೌಲಭ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗಿತ್ತು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700