ಹೆಚ್.ಡಿ.ಕೋಟೆ: ತಾಲೂಕಿನ ಎನ್. ಬೆಳೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಉದ್ಬೂರು ಗಿರಿಜನ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಸಿಕಲ್ ಸೆಲ್ ಅನೀಮಿಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಧಿಕಾರಿಗಳಾದ ಡಾ. ಸಿರಾಜ್ ಅಹಮ್ಮದ್, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಟಿ.ರವಿಕುಮಾರ್, J S S . ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ದೀಪಾ ಭಟ್, ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ತಾಲ್ಲೂಕು ಆರೋಗ್ಯಾಧಿಕಾರಿ ಮಾತನಾಡಿ, ಸಿಕ್ಕಲ್ ಸೆಲ್ ಅನಿಮಿಯ ಕಾಯಿಲೆ ಎಂಬುದು ಕುಡುಗೋಲು ಅಥವಾ ಕುಡ್ಲು ಕಾಯಿದೆ ಎಂದು ಕರೆಯುತ್ತಾರೆ, ಈ ಕಾಯಿಲೆಯಲ್ಲಿ ಕೆಂಪು ರಕ್ತಕಣಗಳು ಕುಡುಗೋಲು ಆಕಾರಕ್ಕೆ ಪರಿವರ್ತನೆಗೊಂಡು ಅನಾರೋಗ್ಯಕ್ಕೆ ಕಾರಣವಾಗುತ್ತದೆ,ಇದು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಒಂದು ಅನುವಂಶಿಕ ಕಾಯಿಲೆ ಆದರೂ ಆರೋಗ್ಯವಂತ ಪೋಷಕರಿಗೆ ಸಿಕಲ್ ಸೆಲ್ ಕಾಯಿಲೆ ಇರುವ ಮಕ್ಕಳು ಹುಟ್ಟಬಹುದು ಎಂದು ತಿಳಿಸಿದರು.
ಪದೇ ಪದೇ ಜ್ವರ, ತೀವ್ರ ಮೂಳೆ ನೋವು, ತೀವ್ರ ಹೊಟ್ಟೆ ನೋವು, ಆಗಾಗ ಕಾಮಲೆ ರೋಗ, ರಕ್ತ ಹೀನತೆ, ವಾಸಿಯಾಗದ ಹುಣ್ಣುಗಳು, ಲಕ್ವಾ, ಈ ಲಕ್ಷಣಗಳು ಮಕ್ಕಳಲ್ಲಿ ಕಂಡುಬರುತ್ತವೆ ಎಂದರು.
ಈ ರೋಗವನ್ನು ಬೇಗ ಕಂಡು ಹಿಡಿದ್ದಲ್ಲಿ ಸಿಕ್ಕಲ್ ಸೆಲ್ ಕಾಯಿಲೆ ಮಗುವಿನ ಜೀವನವನ್ನು ಉಳಿಸಿ, ಆರೋಗ್ಯವನ್ನು ಕಾಪಾಡಬಹುದು. ಸಿಕ್ಕಲ್ ಸೆಲ್ ಕಾಯಿಲೆಗೆ ಚಿಕಿತ್ಸೆ ಪಡೆಯದೆ ಕಡೆಗಣಿಸಿದಲ್ಲಿ ಜೀವಕ್ಕೆ ಅಪಾಯವಾಗಬಹುದು. ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದು ಮತ್ತು ಆರೋಗ್ಯಕರ ಜೀವನ ಕಾಪಾಡಿಕೊಂಡಲ್ಲಿ ಕಾಯಿಲೆಯಿಂದ ಆಗುವ ತೊಂದರೆಯನ್ನು ತಪ್ಪಿಸಿಕೊಳ್ಳಿ ಎಂದು ಅಮೂಲ್ಯವಾದ ಮಾಹಿತಿ ಹಂಚಿಕೊಂಡರು.
ಇವಾಗ ಜಿಲ್ಲೆಯಲ್ಲಿ ಏಳು ಕಡೆ ಪ್ರಾರಂಭ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಎಲ್ಲಾ ಹಾಡಿಯ ಎಲ್ಲಾ ಹಾದಿವಾಸಿ ಗಳಿಗೂ ಮತ್ತು ಎಲ್ಲಾ ಮಕ್ಕಳಿಗೂ ಸಿಕ್ಕಲ್ ಸೆಲ್ ಅನಿಮಿಯ ತಪಾಸಣೆಯನ್ನು ಮಾಡುತ್ತೇವೆ ,ಎಲ್ಲರೂ ಪರೀಕ್ಷಿಸಿ ಕೊಳ್ಳಿ ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಶೇಷಾದ್ರಿ, ಜೆ ಎಸ್ಎಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಪೂಜಾ, ಹಿರಿಯ ಆರೋಗ್ಯ ನಿರೀಕ್ಷಣಾದಿಕಾರಿಗಳಾದ ನಾಗರಾಜು, ರವಿರಾಜ್, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರಾದ ಜಯಮ್ಮ, ಕಮಲ ,ಸುಮಲತಾ, ರತ್ನಮ್ಮ, ಶಾಲೆ ಶಿಕ್ಷಕರಾದ ರವಿ ಮಹದೇವ್,ವೀರಭದ್ರ ,ರಮೇಶ್ ವಿಜಯ್, ಆಶಾ ಕಾರ್ಯಕರ್ತೆಯರು ಮಕ್ಕಳು ಇನ್ನಿತರರು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ


