ಹೆಚ್.ಡಿ.ಕೋಟೆ: ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಎಚ್ ಡಿ ಕೋಟೆ ತಾಲೂಕು ವಿಕಲಚೇತನರ ಹಾಗೂ ಸಬಲೀಕರಣ ಇಲಾಖೆ ಇವರ ಸಹಯೋಗದೊಂದಿಗೆ ಕಾನೂನು ಸೇವಗಳು ಅರಿವು ಬಗ್ಗೆ ಆರೋಗ್ಯಾಧಿಕಾರಿ ರವಿಕುಮಾರ್ ಜಾಗೃತಿ ಮೂಡಿಸಿದರು.
ಹೆಚ್.ಡಿ.ಕೋಟೆ ತಾಲೂಕಿನ ಚಿಕ್ಕೆರೇಯೂರು, ಗ್ರಾಮ ಪಂಚಾಯತಿಯಲ್ಲಿ ಮಾನಸಿಕ ಕಾಯಿಲೆ ಇರುವ ಹಾಗೂ ವಿಕಲಚೇತನರಿಗೆ ಕಾನೂನು ಅರಿವು ಮತ್ತು ಆರೋಗ್ಯ ಸೇವಾ ಸೌಲಭ್ಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದ ಆರೋಗ್ಯಾಧಿಕಾರಿ, ಮಾನಸಿಕ ಕಾಯಿಲೆ ಹಾಗೂ ವಿಕಲಚೇತನರ ಸಮಸ್ಯೆ ಹೊಂದಿರುವವರು ಕಾನೂನಿನಲ್ಲಿ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಿ ಹಾಗೂ ಪ್ರತಿಯೊಬ್ಬ ವಿಕಲಚೇತನರು UD id ಕಾರ್ಡ್ ಗಳನ್ನು ತಪ್ಪದೆ ಪಡೆದುಕೊಳ್ಳಿ. ಶೇಕಡ 70ರಷ್ಟು ವಿಕಲಚೇತನ ಇರುವವರು ಸರ್ಕಾರದಿಂದ ಸಿಗುವ ಉಚಿತವಾದ ಸೌಲಭ್ಯ ಪಡೆದುಕೊಳ್ಳಿ ಹಾಗೂ ಎಲ್ಲಾ ವಿಕಲಚೇತನರು ಆರೋಗ್ಯ ಕಾರ್ಡ್ ನ್ನು ಪಡೆದು ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಪ್ರತಿ 2ನೇ ಶುಕ್ರವಾರ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಗೆ ಮನೋರೋಗ ತಜ್ಞರು ಬರುತ್ತಾರೆ. ಎಲ್ಲರೂ ತಪಾಸಣೆ ಮಾಡಿಸಿಕೊಳ್ಳಿ ಹಾಗೂ ಉಚಿತವಾದ ಔಷಧಿ ಗಳನ್ನು ಪಡೆದುಕೊಳ್ಳಿ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಜೀವಿಕ ಸಂಸ್ಥೆಯ ಉಮೇಶ್ ಹಾಗೂ ವಿಕಲಚೇತನರ ತಾಲೂಕು ಸಂಯೋಜಕರಾದ ಮಹಾದೇವಯ್ಯ ಜಿಲ್ಲಾ ಮಟ್ಟದಮನೋರೋಗ ತಜ್ಞರು ರದ ಡಾ”ಭರತ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶೈಲಜ. ತಾಲೂಕ್ ಆರೋಗ್ಯ ಅಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕರು ನಾಗೇಂದ್ರ, ರವಿರಾಜ್, ಜಿಲ್ಲಾ ಮಟ್ಟದ ಸಿಬ್ಬಂದಿವರ್ಗದವರು, ಪಂಚಾಯತಿ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತೆಯರು, ಮಾನಸಿಕ ಕಾಯಿಲೆ ಮತ್ತು ವಿಕಲಚೇತನರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು
ಈ ಕಾರ್ಯಕ್ರಮದಲ್ಲಿತಾಲೂಕು ಆರೋಗ್ಯ ಅಧಿಕಾರಿಗಳು ಕಾನೂನು ಅರಿವು ಮತ್ತು ಆರೋಗ್ಯ ಸೇವಾ ಸೌಲಭ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗಿತು.
ವರದಿ: ಚಂದ್ರಹಾದನೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700