ನಾಳೆ ರಸ್ತೆಗೆ ಇಳಿಯುವ ಮುನ್ನ ಜನರು ಒಮ್ಮೆ ಯೋಚನೆ ಮಾಡುವುದು ಒಳ್ಳೆಯದು. ಅಖಂಡ ಕರ್ನಾಟಕ ಹಿನ್ನೆಲೆಯಲ್ಲಿ 1900ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಅಲ್ಲದೆ ತಮಿಳುನಾಡು ಮತ್ತು ಕರ್ನಾಟಕ ಗಡಿ ಪ್ರದೇಶವನ್ನು ಬಂದ್ ಮಾಡುವಂತಹ ಯೋಜನೆಗಳು ಇದೆ. ಈ ಹಿನ್ನೆಲೆಯಲ್ಲಿ ಹಲವಾರು ಅಡಚಣೆಗಳು ಎದುರಾಗುತ್ತವೆ.
ಆದ್ದರಿಂದ ಎಚ್ಚರ ವಹಿಸುವುದು ಮುಖ್ಯ. ಹೋಟಲ್ ಕೂಡ ಇರೋದಿಲ್ಲ, ಓಲ, ಊಬರ್, ಆಟೋ ಚಾಲಕರ ಸಂಘ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇರುವುದಿಲ್ಲ.


