ಬೆಂಗಳೂರು ಹನುಮಂತ ನಗರದ ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳಿಗೆ ಠಾಣೆಯಲ್ಲೇ ಸೀಮಂತ ಕಾರ್ಯ ನಡೆದಿದೆ. ಮಹಿಳಾ ಸಿಬ್ಬಂದಿಗಳಿಗೆ ಸೀರೆ ಬಳೆ ಹಾಗೂ ಹೂ ಹಣ್ಣು ಕೊಟ್ಟು ಪೊಲೀಸ್ ಸಿಬ್ಬಂಧಿ ಮಡಿಲು ತುಂಬಿದ್ದಾರೆ.
ನೀಲವ್ವ ಹಾಗೂ ಪ್ರಿಯಾಂಕ ಎಂಬುವ ಇಬ್ಬರು ಕಾನ್ಸ್ ಟೇಬಲ್ ಗಳಿಗೆ ಸೀಮಂತ ನಡೆದಿದೆ. ಠಾಣೆಯಲ್ಲೇ ಸೀಮಂತ ಕಾರ್ಯವನ್ನ ಶಾಸ್ರೋಕ್ತವಾಗಿ ಠಾಣಾ ಸಿಬ್ಬಂಧಿ ನೆರವೇರಿಸಿದರು.


