ಬಿಹಾರದಲ್ಲಿ ಸಾಲ ತೀರಿಸದ ಆರೋಪದ ಮೇಲೆ ಮಹಿಳೆಯನ್ನು ಹೊಡೆದು ಕೊಂದ ಘಟನೆ ನಡೆದಿದೆ ಸಾಲಗಾರರ ದಾಳಿಯಲ್ಲಿ ಮಹಿಳೆಯ ಅಪ್ರಾಪ್ತ ಮಗಳು ಕೂಡ ಗಾಯಗೊಂಡಿದ್ದಾರೆ. ಘಟನೆಯಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಪೂರ್ವ ಕತಿಹಾರ್ ನಗರದಲ್ಲಿ ಈ ಘಟನೆ ನಡೆದಿದೆ. ಮಹಿಳೆ ಲೇವಾದೇವಿಗಾರರಿಂದ ಸಾಲ ಪಡೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಗುರುವಾರ ಗುಂಪೊಂದು ಮನೆಗೆ ಬಂದಿತ್ತು. ಕಂತು ಕಟ್ಟಲು ಹಣವಿಲ್ಲದಿದ್ದರೆ ಗ್ಯಾಂಗ್ ಮಹಿಳೆಯ ಮೊಬೈಲ್ ಗೆ ಬೇಡಿಕೆಯಿಟ್ಟಿತು ಎಂದು ಮಗಳು ಪೊಲೀಸರಿಗೆ ತಿಳಿಸಿದ್ದಾರೆ.
ಮಹಿಳೆ ತನ್ನ ಮೊಬೈಲ್ ಫೋನ್ ನೀಡಲು ನಿರಾಕರಿಸಿದಾಗ ವಾಗ್ವಾದ ನಡೆಯಿತು. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಗುಂಪು ಮಹಿಳೆಗೆ ಥಳಿಸಿದೆ. ಮಹಿಳೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ದಾಳಿಯಲ್ಲಿ ಮಹಿಳೆಯ ಅಪ್ರಾಪ್ತ ಮಗಳು ಕೂಡ ಗಾಯಗೊಂಡಿದ್ದಾರೆ. ಮಹಿಳೆಯ ಕುಟುಂಬದ ದೂರಿನ ಮೇರೆಗೆ ಫಾಲ್ಕಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.


