ಬೀದರ್: ಜಿಲ್ಲೆಯ ಔರಾದ ಪಟ್ಟಣದ ಪಶುಚಿಕಿತ್ಸಾಲಯದ ಆವರಣದಲ್ಲಿ ಕಾಲು ಬಾಯಿ ರೋಗದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಮಾಜಿ ಪಶು ಸಂಗೋಪನೆ ಸಚಿವರು ಪ್ರಭು ಬಿ. ಚವ್ಹಾಣ ಹಾಗೂ ಔರಾದ ತಾಲೂಕಿನ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ರೈತರು ಕಡ್ಡಾಯವಾಗಿ ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿ ಕಾಲು ಬಾಯಿ ಜ್ವರ ರೋಗ ನಿರ್ಮೂಲನೆ ಮಾಡಲು ಸಹಕರಿಸಬೇಕು ಎಂದು ಇದೇ ವೇಳೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಹಾಗೂ ಮುಖಂಡರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್


