ತುಮಕೂರು: ಆಹಾರ ಅರಸಿ ಮನೆಯೊಂದಕ್ಕೆ ನುಗ್ಗಿದ್ದ ನಾಲ್ಕು ಅಡಿ ಉದ್ದದ ನಾಗರಹಾವು ಕಂಡು ಜನರು ಬೆಚ್ಚಿ ಬಿದ್ದಿದ್ದ ಘಟನೆ ನಗರದ ಯಲ್ಲಾಪುರ ವಿನಾಯಕನಗರದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಸಿದ್ದರಾಜು ಎಂಬುವವರ ಮನೆಯ ದೇವರ ಕೋಣೆಯಲ್ಲಿ ಬೃಹತ್ ಗಾತ್ರದ ನಾಗರಹಾವು ಕಾಣಿಸಿಕೊಂಡಿತ್ತು. ದೇವರ ಮನೆಯಲ್ಲಿ ಪೂಜೆ ಮಾಡಲು ಸಿದ್ದರಾಜು ಅಲ್ಲಿ ಅವಿತು ಕುಳಿತಿದ್ದ ನಾಗರಹಾವನ್ನು ಕಂಡಿದ್ದಾರೆ.
ತಕ್ಷಣ ಸಿದ್ದರಾಜು ಭಯಭೀತರಾಗಿ ವಾರಂಗಲ್ ಫೌಂಡೇಶನ್ ವನ್ಯಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಯ ಉರಗ ತಜ್ಞ ದಿಲೀಪ್ ಅವರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ದಿಲೀಪ್ ಸುಮಾರು ನಾಲ್ಕು ಅಡಿ ಉದ್ದದ ನಾಗರಹಾವು, ರಕ್ಷಣೆ ಮಾಡಿ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ.