ಕುಣಿಗಲ್: ನಿಮ್ಮ ವ್ಯಾಪಾರ, ಉದ್ದಿಮೆಗೆ ಇನ್ನೂ ಲೈಸೆನ್ಸ್ ಮಾಡಿಸಿಲ್ಲವೇ? ಹಾಗಿದ್ದರೆ, ಈಗ ಕಚೇರಿಗೆ ಸುತ್ತಾಡದೇ ನೀವು ಕುಳಿತಲ್ಲಿಂದಲೇ ನೀವು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ ಲೈನ್ ನಲ್ಲಿಯೇ ನಿಮಗೆ ಲೈಸೆನ್ಸ್ ದೊರೆಯುತ್ತದೆ.
ಈ ಸೌಲಭ್ಯ ಕುಣಿಗಲ್ ನಲ್ಲಿ ಕೂಡ ಆರಂಭವಾಗಿದೆ. ನಿಮ್ಮ ವ್ಯಾಪಾರ ಉದ್ದಿಮೆಗಳಿಗೆ ಲೈಸೆನ್ಸ್ ಇಲ್ಲವಾದರೆ, ನೀವು ದಂಡ ಪಾವತಿಸಬೇಕಾಗುತ್ತದೆ. ಈವರೆಗೆ ಯಾರೆಲ್ಲ ವ್ಯಾಪಾರ ಪರವಾನಗಿ ಇಲ್ಲದೆ ವ್ಯಾಪಾರ ನಡೆಸುತ್ತಿದ್ದಾರೋ ಅಂತಹವರು ಶೀಘ್ರವೇ ನಿಮ್ಮ ವಿವರಗಳೊಂದಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಲೈಸೆನ್ಸ್ ಪಡೆದುಕೊಳ್ಳಬಹುದಾಗಿದೆ.
ಈ ಲಿಂಕ್ ಗೆ ಕ್ಲಿಕ್ ಮಾಡಿ http://www.mrc.gov.in/TradeLicense/login ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ನಲ್ಲಿಯೇ ಅರ್ಜಿ ಭರ್ತಿ ಮಾಡಿ, ಅರ್ಜಿ ಸಲ್ಲಿಸಿ. ನೀವು ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಪರಿಶೀಲಿಸಲು ಕೂಡ ಇದೇ ವೆಬ್ ಸೈಟ್ ನಲ್ಲಿ ಅವಕಾಶವಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700