ವರದಿ: ಚಂದ್ರಹಾದನೂರು
ಹೆಚ್.ಡಿ.ಕೋಟೆ :ಇಂದು ಬೆಳಿಗ್ಗೆ ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಅವರು ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿದೇ೯ಶಕರಾದ ಜಯಪ್ರಕಾಶ್ ರವರನ್ನು ಭೇಟಿ ಮಾಡಿ. ನಮ್ಮ ತಾಲ್ಲೂಕಿನ ಕೆರೆಗಳು ಬತ್ತಿ ಹೋಗಿವೆ. ಕೆರೆಗೆ ನೀರು ತುಂಬಿಸುವ ವಿಚಾರವನ್ನು ಪ್ರಸ್ತಾಪಿಸಿದಾಗ ಅನುಮತಿ ನೀಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲು ಭರವಸೆ ನೀಡಿದರು.
ಜೊತೆಯಲ್ಲಿ ಸರಗೂರು ತಾಲ್ಲೂಕಿನ ಕಪಿಲ ನದಿ ಹಾಗೂ ನುಗು ಜಲಾಶಯದ ಮೇಲ್ದಂಡೆಯಲ್ಲಿನ ಹಳೆಯೂರು ಬೆಜ್ಜಲಪುರ ಹುಲ್ಲೇಮಾಳ ದೇವಲಾಪುರ ವಲ್ಲಹಳ್ಳಿ ಮಟಕೆರೆ ಹಿರೇಹಳ್ಳಿ ಮೊಳೆಯೂರು ಅಳಗಂಚಿ ಕಾಟವಾಳು ಸಾಗರೆ ಚೆನ್ನೀಪುರ ಹಂಚೀಪುರ ರಾಚಯ್ಯನ ಅವಳಿ ಕೆರೆಗುರುವಯ್ಯನ ಕೆರೆ ನರಸೀಪುರ ಹಾಗೂ ಇನ್ನಿತರೆ ಗ್ರಾಮಗಳ ಬರಿದಾದ ಕೆರೆಗಳಿಗೆ ಕುಡಿಯುವ ನೀರಿಗಾಗಿ ಏತ ನೀರಾವರಿ ಯೋಜನೆಗೆ ಅನುದಾನ ನೀಡುವಂತೆ ಕೋರಿದರು.
ಮೈಸೂರು ಮಾನಂದವಾಡಿ ರಸ್ತೆ ಹೈರಿಗೆ ಗ್ರಾಮದಿಂದ ನಾಲೆ ಮುಖಾಂತರ ಹಳೆ ಹೈರಿಗೆ ಗ್ರಾಮಕ್ಕೆ ಹಾದುಹೋಗುವ ರಸ್ತೆ ತೀವ್ರ ಹದಗೆಟ್ಟಿರುವುದರಿಂದ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಲು ಮನವಿ ಮಾಡಿರುತ್ತಾರೆ. ಇದರ ಜೊತೆಯಲ್ಲಿ ಇನ್ನೂ ಹಲವಾರು ಕಾಮಗಾರಿಗಳಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700