ತ್ರಿಶೂಲ ಹಿಡಿಯೋದಕ್ಕೂ, ತಲ್ವಾರ್ ಹಿಡಿಯೋದಕ್ಕೂ ವ್ಯತ್ಯಾಸ ಇದೆ. ತ್ರಿಶೂಲ ಹಿಡಿಯೋರು ಯಾರ ಮೇಲೂ ಕಲ್ಲು ಎಸೆಯಲ್ಲ. ನಾಲ್ಕೇ ಜನ ತಲ್ವಾರ ಹಿಡಿದವರು ಇಡೀ ಶಿವಮೊಗ್ಗದ ಮೇಲೆ ಕಲ್ಲು ಎಸೆದ್ರು. ತ್ರಿಶೂಲ ಹಿಡಿದವರ ಭಾವನೆ, ತಲ್ವಾರ್ ಹಿಡಿದವರ ಭಾವನೆ ಏನು ಅಂತ ಎಲ್ಲರಿಗೂ ಗೊತ್ತಾಗುತ್ತೆ ಎಂದ ಸಚಿವ ಮಧು ಬಂಗಾರಪ್ಪ ಅವರಿಗೆ ಚಕ್ರವರ್ತಿ ಸೂಲಿಬೆಲೆ ತೀಕ್ಷ್ಣವಾಗೇ ಟಾಂಗ್ ನೀಡಿದ್ದಾರೆ.
ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶಿವಮೊಗ್ಗದಲ್ಲಿ ಹಿಂದೂಗಳು ಪ್ರಚೋದನೆಗೆ ಒಳಗಾಗಿಲ್ಲ ಎಂಬುದಾಗಿ ಪೊಲೀಸರನ್ನೇ ಬಡಿದಿದ್ದಾರೆ. ಈ ಘಟನೆಯನ್ನು ಖಂಡಿಸೋ ಮನಸ್ಥಿತಿ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. ಮಂತ್ರಿಗಳು, ಶಾಸಕರು ತಾವು ಮುಸ್ಲೀಂಮರ ಹತ್ತಿರ ಇದ್ದೇವೆ ಅಂತ ತೋರಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಶಿವಮೊಗ್ಗ ಗಲಭೆಯ ಹಿಂದೆ ಕಾಂಗ್ರೆಸ್ ಸರ್ಕಾರದ ಬೆಂಬಲವಿದೆ. ಕರ್ನಾಟಕದಲ್ಲಿ ಮುಂಬರುವ ದಿನಗಳು ಹೇಗಿರಲಿವೆ ಎಂದು ತೋರಿಸಲು ಹೊರಟಿದ್ದಾರೆ. ತಲ್ವಾರು ಹಿಡಿದುಕೊಂಡು ಬರೋರ ಮುಂದೆ ಪಾಪ ಪೊಲೀಸರು ಲಾಠಿ ಹಿಡಿದು ಓನ್ ಮಾಡುತ್ತಾರೆ ಅಂತ ಹೇಳಿದ್ದಾರೆ.


