ಬೆಂಗಳೂರು: ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಖಾದೀರ್ ಅಹಮ್ಮದ್ (29) ಅವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ರಾಜೇಂದ್ರ ಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಪೂಜಿ ಬಡಾವಣೆ ನಿವಾಸಿ ಖಾದೀರ್ ಹಾಗೂ ಸ್ನೇಹಿತರು, ಆರೋಪಿ ರಾಜೇಂದ್ರ ಪ್ರಸಾದ್ ಮಾಲೀಕತ್ವದ ನಿರ್ಮಾಣ ಹಂತದ ಕಟ್ಟಡದಲ್ಲಿ ಸಾಮಗ್ರಿಗಳನ್ನು ಕದಿಯಲು ಹೋಗಿದ್ದರೆಂಬ ಆರೋಪವಿದೆ.


