ತುಮಕೂರು: ಮಹಿಳೆಯರು ಮುಟ್ಟಾದಾಗ ಹಾಗೂ ಹೆರಿಗೆಯಾದ ಸಂದರ್ಭಗಳಲ್ಲಿ ಸೂತಕದ ಸಂಪ್ರದಾಯದ ಹೆಸರಿನಲ್ಲಿ ಆಕೆಯನ್ನು ಮನೆಯಿಂದ ಹೊರಗಿಡುವ ಗೊಲ್ಲರಹಟ್ಟಿಗಳ ಮೌಢ್ಯದ ಬಗ್ಗೆ ಜಾಗೃತಿ ಮುಂದುವರಿದಿದೆ.
ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿ ಜುಂಜಪ್ಪನಹಟ್ಟಿಗೆ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು. ಮಹಿಳೆಯರನ್ನು ಇಡುವ ಕೃಷ್ಣಕುಟೀರಕ್ಕೆ ಬೀಗ ಹಾಕಿಸಿ, ಮನೆಯಲ್ಲಿಯೇ ಆರೈಕೆ ಮಾಡುವಂತೆ ಮನವಿ ಮಾಡಿದರು.
ಗೊಲ್ಲರಹಟ್ಟಿಗಳಲ್ಲಿ ಸೂತಕದ ಸಂದರ್ಭದಲ್ಲಿ ಮಹಿಳೆಯರನ್ನು ಈ ಕೃಷ್ಣ ಕುಟೀರದಲ್ಲಿಡಲಾಗುತ್ತಿದೆ, ಇದೂ ಇಲ್ಲದ ಹಟ್ಟಿಗಳಲ್ಲಿ ಗುಡಿಸಲು ನಿರ್ಮಿಸಿ ಇಡುವ ಸಂಪ್ರದಾಯದಿಂದ ಅನೇಕ ಪ್ರಾಣ ಹಾನಿಯೂ ಸಂಭವಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶೆ ಹುಂಡಿ ಮಂಜುಳ ಶಿವಪ್ಪ ಅವರು, ಇದಾ ಗುಡ್ಡ ಸಂಪ್ರದಾಯಗಳಿಗೆ ಒಂದು ರೀತಿ ಸಹಕಾರಿಯಾಗುವಂತೆ ಅನೇಕ ಗೊಲ್ಲರಹಟ್ಟಿಗಳ ಸಮೀಪ ಕೃಷ್ಣ ಕೋಟಿ ರಗಳನ್ನು ನಿರ್ಮಾಣ ಮಾಡಲಾಗಿದೆ. ಅದು ಕೂಡ ಇಂತಹ ಮೌಡ್ಯಾಚರಣೆಯನ್ನು ತೊಡೆದು ಹಾಕುವ ಬದಲು ಇದನ್ನು ಮುಂದುವರೆಸಲು ಸಹಕಾರಿಯಾಗುವಂತೆ ಪ್ರೇರೇಪಿಸುವಂತಾಗುತ್ತಿದೆ. ಈಗ ಮೊದಲು ಇಂತಹ ಕೃಷ್ಣ ಕೋಟಿ ರಗಳನ್ನು ಬೀಗ ಹಾಕಿ ಬಂದ್ ಮಾಡಬೇಕು. ಮಹಿಳೆಯರನ್ನು ತಮ್ಮ ಮನೆಗಳಲ್ಲಿಯೇ ಇರಿಸಿಕೊಂಡು ಅವರ ಆರೋಗ್ಯವನ್ನು ಕಾಪಾಡಬೇಕಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಬಿ.ಕೆ.ಚಿದಾನಂದ್, ಕಾರ್ಯದರ್ಶಿ ಸುರೇಶ್ , ಕಾನೂನು ಸೇವಾ ಸಮಿತಿಯ ಸಿಬ್ಬಂದಿ ಕೃಷ್ಣ ಇದ್ದರು.