ಸಾಮಾನ್ಯ ವರ್ಗಾವಣೆ ಸಂಬಂಧ ಮೇಲಾಧಿಕಾರಿಗೆ ಲಂಚ ನೀಡಲು ನಿರಾಕರಿಸಿದ ಕಾರಣಕ್ಕೆ ಸತತ 10 ವರ್ಷಗಳಿಂದ ವರ್ಗಾವಣೆ ಮಾಡದೆ ಡಿ ದರ್ಜೆ ನೌಕರರೊಬ್ಬರನ್ನು ಅಲೆದಾಡಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಸ್ವತಃ ಸಿಎಂ ಕಚೇರಿಗೆ ಪತ್ರ ಬರೆದು, ಲಿಖಿತ ದೂರು ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಕರ್ನಾಟಕ ಭವನದ ಕೊಠಡಿ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದ ಡಿ ದರ್ಜೆ ನೌಕರರೊಬ್ಬರು ಅನ್ಯಾಯಕ್ಕೊಳಗಾಗಿದ್ದಾರೆ.


