ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯ ನಡಿಗುಡ್ಡೆ ದರ್ಖಾಸ್ತು ಮನೆ ಕೆಸರ್ ಗದ್ದೆಯ, ಬೆಳುವಾಯಿ ಪಂಚಾಯತ್ ಮಂಗಳೂರು ತಾಲೂಕಿನ ಮನೆಯೊಂದರಲ್ಲಿ ವೃದ್ಧ ಹಾಗೂ ಅವರ ಪುತ್ರಿ ಸಂಕಷ್ಟದ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಬಗ್ಗೆ ನಮ್ಮತುಮಕೂರು ವಾಹಿನಿ ವರದಿ ಮಾಡಿದ ಬೆನ್ನಲ್ಲೇ ದಲಿತಪರ ಸಂಘಟನೆ ನೊಂದ ಕುಟುಂಬಸ್ಥರನ್ನ ಭೇಟಿ ಮಾಡಿ ಕುಟುಂಬಕ್ಕೆ ಧೈರ್ಯ ತುಂಬಿ, ಆರ್ಥಿಕ ಸಹಕಾರ ನೀಡಿದ್ದಾರೆ.
ಈ ಕುಟುಂಬದ ಬಗ್ಗೆ ನಮ್ಮತುಮಕೂರು ಮಾಧ್ಯಮ ವರದಿ ಮಾಡಿದ ಬೆನ್ನಲ್ಲೇ ಸ್ಥಳೀಯ ಅಧಿಕಾರಿಗಳು ನೊಂದ ಕುಟುಂಬದ ಮನೆಗೆ ತೆರಳಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದಾರೆ. ಆದರೆ ಈವರೆಗೆ ಯಾವುದೇ ಪರಿಹಾರ ಕ್ರಮಗಳು ಆಗಿಲ್ಲ. ಇನ್ನೊಂದೆಡೆ ನಮ್ಮತುಮಕೂರು ಪ್ರಸಾರ ಮಾಡಿದ ವರದಿ ಗಮನಿಸಿದ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಮೂಡಬಿದ್ರಿ ತಾಲೂಕ್ ಸಮಿತಿ ನಡಿಗುಡ್ಡೆಗೆ ತೆರಳಿ ಸಂಕಷ್ಟದ ಸ್ಥಿತಿಯಲ್ಲಿರುವ ಸೋಮಯ್ಯ ಅವರ ಪುತ್ರಿ ಯಶೋಧ ಅವರನ್ನ ಭೇಟಿ ಮಾಡಿ ಧೈರ್ಯ ತುಂಬಿದ್ದು, ಆರ್ಥಿಕ ಸಹಾಯಹಸ್ತ ನೀಡಿದೆ. ಜೊತೆಗೆ ಕುಟುಂಬಕ್ಕೆ ಇನ್ನಷ್ಟು ನೆರವು ನೀಡುವ ಭರವಸೆ ನೀಡಿದೆ.
ಅಧಿಕಾರಿಗಳು ತಕ್ಷಣವೇ ಈ ಕುಟುಂಬಕ್ಕೆ ಮನೆ ಕಟ್ಟಿಸಿಕೊಡಬೇಕು. ಅಧಿಕಾರಿಗಳು ತಕ್ಷಣವೇ ಕ್ರಮಕೈಗೊಳ್ಳದಿದ್ದರೆ ಆದಿದ್ರಾವಿಡ ಸಮಾಜ ಸೇವಾ ಸಂಘ ಹಾಗೂ ಸಮಾನಮನಸ್ಕ ಸಂಘ ಹೋರಾಟ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ವೇಳೆ ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ, ಆದಿದ್ರಾವಿಡ ಸಮಾಜ ಸೇವಾ ಸಂಘದ ಜೊತೆ ಕಾರ್ಯದರ್ಶಿ ರಜನಿ ಪಡುಮಾರ್ನಾಡು, ಗೌರವ ಸಲಹೆಗಾರರಾದ ಚಂದಪ್ಪ ಕೋಣಾಜೆ, ಗೌರವ ಅಧ್ಯಕ್ಷರಾದ ಆನಂದ್ ಕೆ. ಶಾಂತಿನಗರ, ಅಧ್ಯಕ್ಷರಾದ ಶ್ರೀನಿವಾಸ ಪಾಳ್ಯ, ಉಪಾಧ್ಯಕ್ಷರಾದ ಬಾಬು ಅಳಿಯೂರು, ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಶಾಂತಿ ನಗರ, ಜೊತೆ ಕಾರ್ಯದರ್ಶಿ ಶಂಕರ ಬೆಳುವಾಯಿ, ಜೊತೆ ಸಂಘಟನಾ ಕಾರ್ಯದರ್ಶಿ ವಿವೇಕ್ ಶಿರ್ತಾಡಿ, ಸುಧಾಕರ ಬಿರಾವು, ವಿಕೇಶ್ ಕಡಂದಲೆ, ಸಂದೀಪ್ ಅಲಂಗಾರು, ಕಿಶೋರ್ ಮಾರ್ನಾಡು, ವನಿತಾ ಮಾರ್ನಾಡು ಮತ್ತಿತರರು ಜೊತೆಗಿದ್ದರು.
ವಿಡಿಯೋ ನೋಡಿ: