ತುಮಕೂರು: ಕೇಂದ್ರ ಬರ ಅಧ್ಯಯನ ತಂಡ ತುಮಕೂರು ಜಿಲ್ಲೆಗೆ ಆಗಮಿಸಿ ಮಾಹಿತಿ ಕಲೆ ಹಾಕಿತು. ಮೂರು ಅಧಿಕಾರಿಗಳ ತಂಡದಿಂದ ಬರ ಪರಿಸ್ಥಿತಿ ಅಧ್ಯಯನ ನಡೆಸಿತು ಕೊರಟಗೆರೆ ತಾಲ್ಲೂಕಿನ ಭೈರೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿತ್ತು.
ಗ್ರಾಮದ ರೈತ ನಾಗೇಂದ್ರಕುಮಾರ್ ಜಮೀನಿಗೆ ಭೇಟಿ ನೀಡಿ ಶೇಂಗಾ ಬೆಳೆದಿರುವ ನಾಗೇಂದ್ರ ಕುಮಾರ್ ಅವರಿಂದ ನಷ್ಟದ ಮಾಹಿತಿ ಪಡೆಯಿತು. 1.20 ಎಕರೆ ಪ್ರದೇಶದಲ್ಲಿ ರೈತ ನಾಗೇಂದ್ರ ಕುಮಾರ್ ಶೇಂಗಾ ಬೆಳೆದಿದ್ದಾರೆ.
ಭೈರೇನಹಳ್ಳಿ ಗ್ರಾಮದ ಹಲವು ರೈತರ ಜಮೀನಿಗೆ ಭೇಟಿ ನೀಡಿ ಮುಸಿಕಿನ ಜೋಳ, ತೊಗರಿ, ಶೇಂಗಾ, ರಾಗಿ ಬೆಳೆ ಬೆಳೆದಿರುವ ರೈತರಿಂದ ಮಾಹಿತಿ ಪಡೆಯಿತು. ಮಳೆ ಬಾರದೆ ಒಣಗಿರುವ ಬೆಳೆಗಳ ನ್ನು ಕೊರಟಗೆರೆ, ಮಧುಗಿರಿ, ಶಿರಾ ತಾಲ್ಲೂಕಿನಲ್ಲಿ ಬರ ಅಧ್ಯಯನ ನಡೆಸಿತು