ತುಮಕೂರು: ಜಿಲ್ಲೆಯ ತಿಪಟೂರು ನಗರದಲ್ಲಿ ಮಹಿಷಾಸುರ ದಸರಾ ಉತ್ಸವವನ್ನು ಛಲವಾದಿ ಮಹಾಸಭಾ ಹಾಗೂ ಬೌದ್ಧ ಮಹಾಸಭಾ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಆಚರಣೆ ಮಾಡಿದವು.
ತಿಪಟೂರು ನಗರದ ಪ್ರಮುಖ ರಸ್ತೆಯಲ್ಲಿ ಮಹಿಷಾಸುರನ ಬೃಹತ್ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕುವ ಮೂಲಕ ಸಂಘಟನೆಗಳ ಕಾರ್ಯಕರ್ತರು ಮಹಿಷಾಸುರ ದಸರಾವನ್ನು ಆಚರಿಸಿದರು.
ಅಲ್ಲದೆ ಮೈಸೂರಿನಲ್ಲಿ ಮಹಿಷಾಸುರ ದಸರಾ ಆಚರಣೆಗೆ ಅಲ್ಲಿನ ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸುತ್ತಿರುವುದು ಕೂಡ ಖಂಡನೀಯ ಎಂದು ತಿಳಿಸಿದರು.
ಚಕ್ರವರ್ತಿ ಮಹಿಷಾಸುರನ ದಸರಾವನ್ನು ಮೈಸೂರಿನಲ್ಲಿ ಆಚರಣೆ ಮಾಡಲಾಗುತ್ತಿದ್ದು ಅದರಲ್ಲಿ ಪಾಲ್ಗೊಳ್ಳಲು ತಿಪಟೂರಿನಿಂದ ವಿವಿಧ ಪ್ರಗತಿಪರ ಚಿಂತಕರ ತೆರಳುತ್ತಿದ್ದೇವೆ ಎಂದು ಇದೆ ವೇಳೆ ತಿಳಿಸಿದರು.
ಅರಸನಾಗಿ ಇದ್ದ ಮಹಿಷಾಸುರನನ್ನು ರಾಕ್ಷಸನ ಸ್ವರೂಪವಾಗಿ ಮಾಡಿರುವುದು ಖಂಡನೀಯ ಆದರೆ ಮಹಿಶಾಸುರನ ಮೂಲ ನಿವಾಸಿಗಳಾದ ನಾವೆಲ್ಲರೂ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಮುಂದೆ ಸಾಗುತ್ತಿದ್ದೇವೆ ಸಾಗಲಿದ್ದೇವೆ ಎಂದು ಹೇಳಿದರು.