ಬೆಂಗಳೂರು ನಗರದ ದೊಡ್ಡಬಾಣಸವಾಡಿ ಬಳಿ ಕುಡಿದು ಶಾಲಾ ಬಸ್ ಚಾಲನೆ ಮಾಡಿ ಪಾದಚಾರಿಗೆ ಗುದ್ದಿದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾನೆ. ಆಂಜಿನಪ್ಪ ಮೃತ ವ್ಯಕ್ತಿ. ಚಾಲಕ ಸುಭಾಷ್ ಕುಡಿದು ಶಾಲಾ ಬಸ್ ಚಲಾಯಿಸುತ್ತಿದ್ದ ವ್ಯಕ್ತಿ.
ಚಾಲಕ ಸುಭಾಷ್ ಅಕ್ಟೋಬರ್ 10 ರಂದು ಕಂಠಪೂರ್ತಿ ಕುಡಿದು 25 ಮಕ್ಕಳನ್ನು ಕೂರಿಸಿಕೊಂಡು ದೊಡ್ಡಬಾಣಸವಾಡಿ ಬಳಿ ಬಸ್ ಚಾಲನೆ ಮಾಡುತ್ತಿದ್ದಾಗ ಮೆಡಿಕಲ್ ಶಾಪ್ ನಿಂದ ಮನೆಗೆ ತೆರಳುತ್ತಿದ್ದ ಆಂಜಿನಪ್ಪಗೆ ಗುದ್ದಿದ್ದಾನೆ. ಬಾಣಸವಾಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


