ತುಮಕೂರು: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂನಲ್ಲಿ ಭಾನುವಾರ ಸಂಭವಿಸಿದ ಕಾರು ಮತ್ತು ಟ್ರಕ್ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ತುಮಕೂರಿನ ನಿವಾಸಿಗಳಾದ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ತುಮಕೂರಿನ ಜಯನಗರದ ನಿವಾಸಿಗಳಾದ ಚನ್ನಪ್ಪ, ಮಲ್ಲ, ಮಣಿಕಂಠ, ಹೇಮಂತ್ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಇಂದು ಒಂದೇ ಕುಟುಂಬದ ಏಳು ಮಂದಿಯ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ವಿಷಯ ತಿಳಿದು ಕಾಂಗ್ರೆಸ್ ವಕ್ತಾರ ಮುರುಳೀಧರ ಹಾಲಪ್ಪ ಅವರು ಸೋಮವಾರ ಮೃತರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು. ಒಂದೇ ಕುಟುಂಬದ ಏಳು ಮಂದಿ ದಾರುಣ ಸಾವು ಕಂಡ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರ ರೋಧನೆ ಮುಗಿಲು ಮುಟ್ಟಿತ್ತು.