ತುರುವೇಕೆರೆ: ಶಾಸಕ ಎಂ.ಟಿ.ಕೃಷ್ಣಪ್ಪನವರೇ ನಿಮ್ಮ ಅಧಿಕಾರಾವಧಿ 20 ವರ್ಷಗಳಲ್ಲಿ ತುರುವೇಕೆರೆ ತಾಲ್ಲೂಕಿನ ದಲಿತ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯ ಇಲ್ಲದಿರುವುದು ದುರಂತ. ಕೆಟ್ಟ ರಾಜಕೀಯ ಮಾಡುವುದನ್ನು ಬಿಟ್ಟು ಅಭಿವೃದ್ಧಿಯ ಕಡೆ ಗಮನಹರಿಸಿ ಎಂದು ಸಿ.ಎಸ್. ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಮೇಲನಹಳ್ಳಿ ಮಂಜಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬೆಮೆಲ್ ಕಾಂತರಾಜು ಅವರ ವಿರುದ್ಧ ವರ್ಗಾವಣೆ ದಂಧೆ ಆಪಾದನೆಯ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದ ಅವರು, ಕೃಷ್ಣಪ್ಪನವರ ಬೆಂಬಲಿಗರು ಬೆಮೆಲ್ ಕಾಂತರಾಜುರವರ ಬಗ್ಗೆ ಆರೋಪಗಳು ಹಾಗೂ ಹಗುರವಾಗಿ ಮಾತನಾಡಿದ್ದಾರೆ. ಇದು ಖಂಡನೀಯವಾಗಿದೆ. ಕಾಂತರಾಜುರವರು ಈ ತಾಲ್ಲೂಕಿನ ಶಾಸಕರಲ್ಲ, ತಾಲ್ಲೂಕು ಆಡಳಿತ ಕೃಷ್ಣಪ್ಪನವರ ಕೈನಲ್ಲಿ ಇದೆಯೇ ವಿನಃ ಕಾಂತರಾಜುರವರ ಬಳಿ ಇಲ್ಲ. ಅವರು ವರ್ಗಾವಣೆಯ ದಂಧೆಮಾಡುತ್ತಿಲ್ಲ, ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವವಂತ ಕಾರ್ಯಕರ್ತ. ನೀವು ಶಾಸಕರಾಗಿ ಇಂತಹ ಕೆಳಮಟ್ಟದ ಆಪಾದನೆಗಳನ್ನು ಮಾಡಬೇಡಿ ಎಂದರು.
ತಾಲ್ಲೂಕಿನಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ನಿಮ್ಮ ಬೆಂಬಲಿಗರು ಮೂರು ನಾಲ್ಕು ಬೋರ್ವೆಲ್ ಗಳನ್ನು ಓರ್ವ ವ್ಯಕ್ತಿಯೇ ಕೊರೆಸಿಕೊಂಡಿದ್ದಾರೆ. ಇದನ್ನೇ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ ? ಬೇರೆ ದಲಿತರಾರು ನಿಮಗೆ ಕಾಣಿಸಲಿಲ್ಲವೇ? ಎಂದು ಪ್ರಶ್ನಿಸಿದರು.
ನಮ್ಮ ದಲಿತರ ಕಾಲೋನಿ ಗಳಿಗೆ ಹೋಗಲು ಸರಿಯಾದ ರಸ್ತೆಗಳಿಲ್ಲ, ಅಂಬೇಡ್ಕರ್ ಭವನಗಳು ಇಲ್ಲ ಮೂಲಭೂತ ಸೌಕರ್ಯಗಳಿಲ್ಲ . ಮುಂದಿನ ದಿನಗಳಲ್ಲಿ ಕೆಟ್ಟ ರಾಜಕೀಯ ಮಾಡುವುದನ್ನು ಬಿಟ್ಟು ಅಭಿವೃದ್ಧಿಯ ಕಡೆ ಗಮನಹರಿಸಿ ಬೆಮೆಲ್ ಕಾಂತರಾಜು ರವರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ದಲಿತ ಮುಖಂಡ ಗುರುದತ್ ಮಾತನಾಡಿ, ಶಾಸಕ ಕೃಷ್ಣಪ್ಪನವರು ಗಾಳಿಯಲ್ಲಿ ಗುಂಡು ಹಾರಿಸಿದಂತೆ ಮಾತನಾಡಿದ್ದಾರೆ. ಅವರ ವರ್ಚಸ್ಸಿಗೆ ಅದು ತಕ್ಕದಲ್ಲ ಎಂದರು.
ಈ ಸಂದರ್ಭದಲ್ಲಿ ಮಾಜಿ ಜೆಲ್ಲಾ ಪಂ. ಮಾಜಿ ಅಧ್ಯಕ್ಷ ಕೊಡಗಿಹಳ್ಳಿ ಹನುಮಂತಯ್ಯ, ತುರುವೇಕೆರೆ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷರಾದ ನರಸಿಂಹಯ್ಯ, ಮುಖಂಡರುಗಳಾದ ಮಲ್ಲೂರು ತಿಮ್ಮೇಶ್, ದಂಡಿನಶಿವರ ಕುಮಾರ್, ಡೊಂಕಿಹಳ್ಳಿ ರಾಮಣ್ಣ, ಮುನಿಯೂರು ಗಿರೀಶ್, ಕೊಡಗೀಹಳ್ಳಿ ಚಂದ್ರಯ್ಯ, ಹುಚ್ಚಪ್ಪ ದೊಡ್ಡಶೆಟ್ಟೀಕೆರೆ ಮತ್ತಿತರರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ