ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಆದಿ ಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ಇವರ ವತಿಯಿಂದ ,ಪತ್ರಿಕಾಗೋಷ್ಠಿ ನಡೆಸಲಾಯಿತು,
ಆದಿ ಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ಸಂಸ್ಥಾಪಕರಾದ ಮೂರ್ತಿ ಸಿ.ಎಸ್. ಮಾತನಾಡಿ, ತುರುವೇಕೆರೆ ತಾಲೂಕಿನಲ್ಲಿ ಇರುವ ಎಲ್ಲಾ ಸಮುದಾಯದ, ಎಲ್ಲಾ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಏಕತಾ, ಸಮಾನತೆ, ಮಾನವೀಯತೆ, ದೃಷ್ಟಿಯಿಂದ ಪಟ್ಟಣದಲ್ಲಿ ನವಂಬರ್ 26ರಂದು ಅದ್ದೂರಿ ಭೀಮೋತ್ಸವ ಸೋದರತ್ವ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ, ಇದರ ಹಿನ್ನೆಲೆಯಲ್ಲಿ ಇದೇ ತಿಂಗಳು 26 ನೇ ತಾರೀಕು ಪಟ್ಟಣದಿಂದ ಭೀಮಾ ಜ್ಯೋತಿ ಹೊತ್ತು, ಭೀಮರಥ ಸುಮಾರು 15 ದಿನಗಳ ಕಾಲ ತುರುವೇಕೆರೆ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಸಂಚರಿಸಲಾಗುವುದು ಎಂದು ತಿಳಿಸಿದರು.
ಮನುವಾದಿಗಳ ಕೈಗೆ ಆಡಳಿತ ಸಿಕ್ಕಿ ಸಂವಿಧಾನವು ಅಪಾಯದ ಅಂಚಿನಲ್ಲಿದೆ, ಈ ನಿಟ್ಟಿನಲ್ಲಿ ಯೋಚಿಸಿ, ಸಂವಿಧಾನವನ್ನು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬ ಶೋಷಿತ ಹಾಗೂ ಶೂದ್ರ ಭಾರತೀಯ ಪ್ರಜೆ ಕರ್ತವ್ಯವಾಗಿದೆ. ಹಾಗಾಗಿ ಪ್ರತಿಯೊಂದು ಹಳ್ಳಿಗೆ ಬರುವ ಭೀಮ ಜ್ಯೋತಿ ರಥದಲ್ಲಿರುವ ದೀಪಕ್ಕೆ ತಮ್ಮ ಮನೆಯ ಎಣ್ಣೆ ಬತ್ತಿಯನ್ನು ಹಾಕಿ ಅದು ಹಾರದ ಹಾಗೆ ಉಳಿಸಿ ಮುಂದಿನ ಗ್ರಾಮಗಳಿಗೆ ಬೀಳ್ಕೊಟ್ಟು ಮತ್ತು ಶೋಷಿತ ವರ್ಗಕ್ಕೆ ಹಗಲಿರಲು ಶ್ರಮಿಸಿದ ಬುದ್ದ, ಬಸವ, ಅಂಬೇಡ್ಕರ್ರವರ ,ಶ್ರಮಕ್ಕೆ ನಾವುಗಳೆಲ್ಲ ಋಣಿಯಾಗುವುದೆಂದು ಪ್ರತಿಜ್ಞೆ ಮಾಡುವಂತೆ ಮನವಿ ಮಾಡಿದರು.
ನವಂಬರ್ 26 ನೇ ತಾರೀಕು ನಡೆಯುವ ಅದ್ದೂರಿ ಭೀಮೋತ್ಸವ ಸೋದರತ್ವ, ಸಮಾವೇಶಕ್ಕೆ ಪ್ರತಿಯೊಂದು ತಾಲೂಕಿನ ಗ್ರಾಮದಲ್ಲಿನ ಎಲ್ಲಾ ಸಮುದಾಯದ ಬಂಧುಗಳು, ಕುಟುಂಬ ಸಮೇತ ಬಂದು,ಇದರ ಜೊತೆಗೆ ತಾಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳು ಒಗ್ಗೂಡಿ, ಈ ಕಾರ್ಯಕ್ರಮವನ್ನು ಇಡೀ ರಾಜ್ಯ ನಮ್ಮ ತುರುವೇಕೆರೆ ತಾಲೂಕಿನ ಕಡೆ ಮುಖ ಮಾಡಬೇಕು ಎನ್ನುವ ಹಾಗೆ ಆಗಬೇಕು ಎಂದರು. ಇದೇ ವೇಳೆ ತಾಲೂಕಿನ ಎಲ್ಲಾ ಸಮುದಾಯದ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ