ಹಣಕಾಸಿನ ವಿಚಾರವಾಗಿ ಅಪಹರಿಸಿದ್ದ ವ್ಯಕ್ತಿಯನ್ನು ರಕ್ಷಿಸುವ ಮೂಲಕ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಅಭಿಲಾಷ್ ಎಂಬುವರನ್ನು ಬೆಂಗಳೂರಿನಿಂದ ಅಪಹರಿಸಿ ರಾಮನಗರ ಗೋಡೌನ್ ನಲ್ಲಿ ಇರಿಸಿದ್ದರು.
ಅಪಹರಣಕಾರರು ಊಟಕ್ಕೆ ತೆರಳಿದ್ದಾಗ ಪೊಲೀಸರಿಗೆ ಅಭಿಷೇಕ್ ಕರೆ ಮಾಡಿ ಕಿಡ್ನಾಪ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿ ಅಭಿಷೇಕ್ ನನ್ನು ರಕ್ಷಿಸಿ, ನಾಲ್ವರನ್ನು ಬಂಧಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಪ್ರಕರಣದ ತನಿಖೆ ವರ್ಗಾವಣೆ ಮಾಡಲಾಗಿದೆ.


