ರಾಜ್ಯದಲ್ಲಿ ಸದ್ಯ ಸದ್ದು ಮಾಡುತ್ತಿರುವ ಹುಲಿಯ ಉಗುರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಅವರ ಪುತ್ರ ಶಾಶ್ವತ ಗೌಡ ಪಾಟೀಲ್ ನಿಂದ ಹುಲಿ ಉಗುರಿನ ಪೆಂಡೆಂಟ್ ಅನ್ನು ಅರಣ್ಯ ಅಧಿಕಾರಿಗಳು ವಶಪಡೆದಿದ್ದಾರೆ.
ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪುತ್ರ ಹುಲಿ ಉಗುರು ಧರಿಸಿದ ಆರೋಪ ಕೇಳಿಬಂದಿತ್ತು. ಇದಕ್ಕೆ ಸಾಕ್ಷಿವೆಂಬಂತೆ ಕೆಲ ಫೋಟೋಗಳು ವೈರಲ್ ಆಗಿದ್ದವು. ಬಳಿಕ ಅವರು ಅದು ನಕಲಿ ಹುಲಿ ಉಗುರು, ಬೇಕಾದರೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಮಾಡಲಿ ಎಂದಿದ್ದರು. ಇದರ ಬೆನ್ನಲ್ಲೇ ಇಂದು ನಗರದಲ್ಲಿರುವ ವಿಜುಗೌಡ ಪಾಟೀಲ್ ಮನೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ ಮಾಡಿದ್ದು, ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪುತ್ರನ ಕೊರಳಲ್ಲಿ ಹುಲಿ ಉಗುರಿನ ಮಾದರಿಯ ಹುಲಿ ಉಗುರಿನ ಪೆಂಡೆಂಟ್ ಹಾಕಿರುವ ಫೋಟೋ ವೈರಲ್ ಆಗಿತ್ತು. ಹುಲಿ ಉಗುರಿನ ಪೆಂಡೆಂಟ್ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿಜುಗೌಡ ಪಾಟೀಲ್ ಪ್ರತಿಕ್ರಿಯಿಸಿ, ನಮ್ಮ ಬಳಿ ಇರುವುದು ನಕಲಿ ಹುಲಿ ಉಗುರು ಎಂದು ವಿಜುಗೌಡ ತಿಳಿಸಿದ್ದಾರೆ ಪುತ್ರ ಶಾಶ್ವತ ಗೌಡ ಬಳಿ ಇರುವುದು ನಕಲಿ ಹುಲಿ ಉಗುರಿನ ಪೆಂಡೆಂಟ್ ಅರಣ್ಯ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದೇನೆ ತನಿಖೆಗೆ ಸಹಕರಿಸಿದ್ದೇವೆ ವಾಸ್ತು ಕಾರಣದಿಂದ ವರ್ಷಗಳ ಹಿಂದೆ ನಕಲಿ ಹುಲಿ ಉಗುರು ಖರೀದಿ ಮಾಡಲಾಗಿತ್ತು ನಾವೇ ಹುಲಿಯಂತಿದ್ದೇವೆ ನಮಗ್ಯಾಕೆ ಹುಲಿಯು ಗುರು ಎಂದು ಜಿಲ್ಲಾ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಹೇಳಿದರು.
ಇನ್ನು ಈ ಕುರಿತಂತೆ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ಅವರು ಮಾತನಾಡಿ, ಹುಲಿಯು ಗುರು ಅಸಲಿಯೋ ನಕಲಿಯೋ ಎಂಬುದನ್ನು ಪರೀಕ್ಷಿಸುತ್ತೇವೆ ಕಳುಹಿಸುತ್ತೇವೆ ಎಂದರು.