ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವು ಪ್ರದೇಶದಲ್ಲಿ ಮತ್ತೆ ಚಿರತೆ ಭೀತಿ ಶುರುವಾಗಿದೆ. ರಾತ್ರಿ ಸಮಯ ಚಿರತೆ ಓಡಾಟವು ಹೆಚ್ಚಾಗಿದ್ದು, ಜೀವ ಭಯವನ್ನು ಹುಟ್ಟುಹಾಕಿದೆ. ವೈಟ್ ಫೀಲ್ಡ್ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿದೆ.
ಬ್ರೂಕ್ ಫೀಲ್ಡ್ ನ ಎಇಸಿಎಸ್ ಲೇಔಟ್ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ರಾತ್ರಿ ವೇಳೆ ಕಾರಿಗೆ ಅಡ್ಡಲಾಗಿ ಚಿರತೆಯೊಂದು ಓಡಿದೆ. ಇದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಎಇಸಿಎಸ್ ಲೇಔಟ್ ನಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರಲು ತಿಳಿಸಿದ್ದಾರೆ.


