ಹಾವೇರಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರದ ಒಳಗೂ ಮತ್ತು ಹೊರಗು ನಾನು ಹೋರಾಟ ಮಾಡುತ್ತೇನೆ.
ಬಿಜೆಪಿ ಸರ್ಕಾರ ಇದ್ದಾಗ ಬೇರೆ, ಈಗ ಬೇರೆ ಎಂದು ಏನು ಇಲ್ಲ. ಅಂದು ಇಂದು ನಾನು ಪಂಚಮಸಾಲಿ ಪರವಾಗಿದ್ದೇನೆ. ಇವತ್ತಿಗೂ ನಾನು ಪಂಚಮಸಾಲಿ ಹೋರಾಟದ ಪರವಾಗಿದ್ದೇನೆ ಎಂದರು.