ತುರುವೇಕೆರೆ: ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಚಿಕಿತ್ಸೆಗಳು ಅಗತ್ಯವಾಗಿದೆ ಎಂದು ಶಾಸಕ ಎಂ ಟಿ ಕೃಷ್ಣಪ್ಪ ಹೇಳಿದರು.
ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಬೆಂಗಳೂರು ಕ್ಲಿನಿಕ್ ಮಾಲೀಕತ್ವದ ಡಾ. ಶಶಿಧರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಆಸ್ಪತ್ರೆಗಳ ಸೇವೆಗಳು ಉತ್ತಮವಾಗಿದ್ದರೂ ಸಹ, ಕೆಲವೊಮ್ಮೆ ಖಾಸಗಿ ಆಸ್ಪತ್ರೆಗಳ ತುರ್ತು ಸೇವೆಗಳು ಸಹ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಖಾಸಗಿ ಆಸ್ಪತ್ರೆಗಳು ತೆರೆದಿದ್ದು, ಎಲ್ಲರೂ ಸಹ ಬಡವರಿಗೆ, ಸಾರ್ವಜನಿಕರಿಗೆ, ರೈತರಿಗೆ, ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು ಎಂದು ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಮತ್ತು ಬೆಂಗಳೂರು ಕ್ಲಿನಿಕ್ ಡಿ. ಶಶಿಧರ್ ರವರಿಗೆ ಶುಭ ಹಾರೈಸುವ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಶ್ರೀನಿವಾಸ್. ಡಾ.ವೀಣಾ ಯೋಗೇಶ್. ಮಂಜುನಾಥ್ ಗ್ರಾ.ಪಂ. ಅಧ್ಯಕ್ಷರು. ಹೆಡಗಿಹಳ್ಳಿ ವಿಶ್ವನಾಥ್ ತಾಲೂಕು ಜೆಡಿಎಸ್ ಯುವ ಮುಖಂಡರು. ವೆಂಕಟಾಪುರ ಯೋಗೀಶ್ ಜೆ.ಡಿ.ಎಸ್.ಮಾಧ್ಯಮ ವಕ್ತಾರರು. ಯೋಗೇಶ್ ಗ್ರಾ.ಪಂ. ಅಧ್ಯಕ್ಷರು ಕುರುಬರಹಳ್ಳಿ. ತಬ್ರೇಜ್. ನವೀನ್ ಕಲ್ಲೂರು. ಧನುಪಾಲ್ ಗೌಡ ಮುತ್ತುಗದಹಳ್ಳಿ ಸೇರಿದಂತೆ ಬೆಂಗಳೂರು ಕ್ಲಿನಿಕ್ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


