ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತುರನೂರು ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಪ್ರತಿ ಮನೆಯಲ್ಲೂ ಸಾವು ಸಂಭವಿಸುತ್ತಿದ್ದು, ಚಿಕ್ಕವರಿಂದ ಹಿಡಿದು ಎಲ್ಲ ವಯಸ್ಸಿನವರು ಮೃತಪಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಅರ್ಚಕರು ದುರ್ಗಾದೇವಿ ವಿಗ್ರಹದ ಮೇಲಿದ್ದ ಎಣ್ಣೆ ಜಿಗಿಯನ್ನ ತೆಗೆಯಲು ಹೋಗಿ ಮೂರ್ತಿಯ ಒಂದು ಭಾಗ ವಿರೂಪ ಮಾಡಿದ್ದರು. ಇದರಿಂದಾಗಿ ಗ್ರಾಮಕ್ಕೆ ಶಾಪ ತಗುಲಿ ಸಾವು ಸಂಭವಿಸುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ.
ಆದರೆ ಇದು ಶಾಪ ಹೌದೋ ಅಲ್ಲವೋ ಎಂಬುದರ ನಿಖರ ಕಾರಣ ತಿಳಿಯಬೇಕಿದ್ದು, ಸದ್ಯ ಗ್ರಾಮಸ್ಥರು ಹೋಮ–ಹವನ, ಅಭಿಷೇಕ & ನೈವೇದ್ಯ ಮಾಡಿ ದೇವಿಯನ್ನು ಶಾಂತಗೊಳಿಸಲು ಮುಂದಾಗಿದ್ದಾರೆ.


