ಯುವಕನೊಬ್ಬ ತನ್ನ ಸೋದರ ಸಂಬಂಧಿಯನ್ನು ಮದುವೆಯಾಗುವ ಆಸೆಯಲ್ಲಿ ಆಕೆಯ ಪತಿಯನ್ನು ಕೊಲೆ ಮಾಡಿದ್ದಾನೆ. ಬೆಂಗಳೂರಿನ ಚಂದ್ರಾ ಲೇಔಟ್ ನಲ್ಲಿ ಕೊಲೆ ನಡೆದಿರುವುದಾಗಿ ವರದಿಯಾಗಿದೆ.
ಆರೋಪಿ ವಾಹಿದ್ ಅಹಮದ್ ತನ್ನ ಸಹೋದರ, ಗಂಗೊಂಡನಹಳ್ಳಿ ನಿವಾಸಿಗಳಾದ ಮಥೀನ್ ಅಹಮದ್ (24) ಎಂಬಾತನೊಂದಿಗೆ ಗುರುವಾರ ರಾತ್ರಿ ಗಂಗೊಂಡನಹಳ್ಳಿಯ ಓಂ ಶಕ್ತಿ ದೇವಸ್ಥಾನದ ಬಳಿ ಮುದಸ್ಸಿರ್ ಖಾನ್ ಎಂಬಾತನ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ್ದಾನೆ.


