ತುಮಕೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಮಧುಗಿರಿ ಬೆಟ್ಟದ ಮೇಲಿನಿಂದ ಬೃಹತ್ ಬಂಡೆಯೊಂದು ಉರುಳಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ತುಮಕೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಮಧುಗಿರಿ ಏಕಾಶಿಲಾ ಬೆಟ್ಟದ ಮೇಲಿನಿಂದ ದೊಡ್ಡ ಬಂಡೆಯೊಂದು ಉರುಳಿ ಬಿದ್ದಿದೆ. ಬೃಹತ್ ಬಂಡೆ ಉರುಳಿ ಬಿದ್ದಿರುವುದನ್ನು ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.
ಇಷ್ಟೊಂದು ದೊಡ್ಡ ಬಂಡೆ ಉರುಳಿದರೂ ಯಾರಿಗೂ ಅಪಾಯವಾಗದಿರುವುದಕ್ಕೆ ಮಧುಗಿರಿ ಶ್ರೀ ದಂಡಿನ ಮಾರಮ್ಮನ ಕೃಪೆಯೇ ಕಾರಣ ಎಂದು ಇಲ್ಲಿನ ಜನರು ಆತಂಕದಿಂದ ಮಾತನಾಡುತ್ತಿರುವ ದೃಶ್ಯ ಕಂಡು ಬಂತು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700